ನಿಫ್ಟ್‌ನಲ್ಲಿನ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಸುಲುಭವಾಗಿ ಜಗತ್ತಿನ ಜಾಲಬಂಧಕ್ಕೆ (ನೆಟ್‌ವರ್ಕ್) ಸೇರಲು ಸಹಾಯ ಮಾಡುತ್ತದೆ, ಹಾಗೂ ಸ್ಥಳೀಯ ಉದ್ಯಮದ ಶೈಲಿಯ ಹೆಚ್ಚಿನ ಪ್ರಶಂಸೆ ಪಡೆಯಲು ಸಹಾಯವಾಗಿದೆ. ಅನೇಕ ಶಿಸ್ತುಬದ್ಧ ನಿಯಮ ಮತ್ತು ವಿಶಾಲತೆಯ ಆಧಾರದ ವಿನ್ಯಾಸ ವಿಧ್ಯಾರ್ಥಿಗಳ ಸರ್ವತ್ರ ಬೆಳವಣಿಗೆಯ ಗುರಿಯನ್ನು ಹೊಂದಿದೆ. ಬದಲಾಗುತ್ತಿರುವ ಉದ್ಯಮ ಮತ್ತು ವಾಣಿಜ್ಯ ಮಾದರಿಯಿಂದ ಗ್ರಹಿಸಿದ ವಿಷಯಗಳನ್ನು ಒಳಗೊಂಡ, ಹಾಗೂ ಕ್ರಮಬದ್ಧವಾಗಿ ಶಿಕ್ಷಣ ತಜ್ಞರು ಮತ್ತು ಉದ್ಯಮ ನಿಪುಣರಿಂದ ಪರಿಶೀಲಿಸಲ್ಪಟ್ಟ ವಿಧಾನ. ನಿಫ್ಟ್ ಡಿಸೈನ್, ಮ್ಯಾನೇಜ್‌ಮೆಂಟ್ ಮತ್ತು ಟೆಕ್ನಾಲಜಿಯಲ್ಲಿ 4 ವರ್ಷದ ಪದವಿ ಮತ್ತು 2 ವರ್ಷಗಳ ಉನ್ನತ ಪದವಿಯ ಪ್ರಸ್ತಾಪನೆ ಮಾಡುತ್ತದೆ.
ಅಧ್ಯಾಪನಾ ಶಾಸ್ತ್ರ
ಸಂಸ್ಥೆಯಲ್ಲಿನ ಕಲಿಕೆಯು ಏಕೀಕೃತ, ಸಂದರ್ಭಾತೀತ ಮತ್ತು ಆರೈಕೆಯ ಪರಿಸರವನ್ನು ವಿದ್ಯಾಭ್ಯಾಸಕ್ಕಾಗಿ ಒಂದುಗೂಡಿಸುತ್ತದೆ. ಮಾಹಿತಿ, ಅನುಭವ ಮತ್ತು ಅಭ್ಯಾಸವನ್ನು ಉಪಯೋಗಿಸಿಕೊಂಡು ಮಾಡುವ ಸ್ವಯಂ ಪ್ರೇರಿತ ಕಲಿಕೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಅಧ್ಯಾಪನಾ ಕ್ರಮ ಪೂರ್ಣ ಕಾರ್‍ಯ ಸಂಬಂಧಿ ಪರಿಧಿಯ ಒಳಗಿನ ಅಂಶಗಳನ್ನು ಉಪಯೋಗಿಸಿ ಅಂತರ್-ಶಿಸ್ತುಬದ್ಧ ನಿಯಮಗಳ ಪರಿಣಾಮ ಮತ್ತು ಸಮಸ್ಯೆಯ ಪರಿಹಾರವನ್ನು ಗುರಿಯಾಗಿಸಿಕೊಂಡಿದೆ. ವಿದ್ಯಾರ್ಥಿಗಳು ತರಗತಿಯ ಮತ್ತು ಕಾರ್ಖಾನೆಯ ಕಾರ್ಯನಿಯೋಜನೆಯನ್ನು ಕೈಗೊಳ್ಳುತ್ತಾರೆ, ಕ್ಷೇತ್ರ ವೀಕ್ಷಣೆ ನಿರ್ವಹಣೆ, ನಿರೂಪಣೆ ಕೊಡುವುದು, ಮತ್ತು ಸಮೂಹ ಚರ್ಚೆ ಮತ್ತು ವಿಚಾರಗೋಷ್ಠಿಯಲ್ಲಿ ಭಾಗವಹಿಸುವುದು ಮತ್ತು ಉದ್ಯಮದ ಸಂಬಂಧವನ್ನು ಬೆಳೆಸುವಂತೆ ಹುರಿದುಂಬಿಸಲಾಗುತ್ತದೆ.
ವಿಮರ್ಶೆ
ನಿರಂತರ ವಿಮರ್ಶೆ ಮತ್ತು ಮಾಪನವನ್ನು ಎಲ್ಲಾ ಸೆಮಿಸ್ಟರ್ ಉದ್ದಕ್ಕೂ ಕಾರ್ಯ ನಿಯೋಜನೆ (ಅಸೈನ್‌ಮೆಂಟ್), ಯೋಜನೆ (ಪ್ರಾಜೆಕ್ಟ್), ಇಂಟರ್ನ್‌ಶಿಪ್ ಮತ್ತು ನಿರೂಪಣೆಯ ಮೂಲಕ ಕೈಗೊಳ್ಳಲಾಗುತ್ತದೆ. ಶಿಕ್ಷಣ ತಜ್ಞರು ಮತ್ತು ಉದ್ಯಮದ ನಿಪುಣರನ್ನು ಒಳಗೊಂಡ ಜೂರಿಗಳು ವಿದ್ಯಾರ್ಥಿಗಳ ಕೆಲಸ ಮತ್ತು ಸಾಮರ್ಥ್ಯವನ್ನು ಪರಿಶೀಲಿಸುತ್ತಾರೆ. ಇದರ ಗುರಿಯೆಂದರೆ ಹತ್ತಿರದಿಂದ ವಿದ್ಯಾರ್ಥಿಗಳಿಗೆ ಸ್ಪರ್ದಾತ್ಮಕ ವೃತ್ತಿದಾರನಾಗಿ ಉಪದೇಶಿಸುವುದು ಮತ್ತು ಪರಿಶೀಲನೆ ಮತ್ತು ವಿದ್ಯಾರ್ಥಿಗಳಿಗೆ ಅವರ ಕಾರ್ಯ ನಿರ್ವಹಣೆ ಮತ್ತು ಬೆಳವಣಿಗೆಯ ಮೇಲೆ ವಿಮರ್ಶಾತ್ಮಕ ಪ್ರತ್ಯುತ್ತರವನ್ನು ನೀಡುವುದು.
ಮುಖ್ಯ ಶೈಕ್ಷಣಿಕ ಚಟುವಟಿಕೆಗಳು
ಕುಶಲಕಲೆಯ ಪರಿಶೀಲನೆ ಮತ್ತು ದಾಖಲೆ: ನಿಫ್ಟ್‌ನ ಕುಶಲಕಲೆಯ ಸಮುದಾಯ ನೇತೃತ್ವದ ಅಂಗವಾಗಿ, ವಿದ್ಯಾರ್ಥಿಗಳು ಕ್ಷೇತ್ರ ಸಂದರ್ಶನವನ್ನು ಕೈಗೊಳ್ಳುತ್ತಾರೆ, ಕುಶಲಕರ್ಮಿಗಳ ಜೊತೆ ಹತ್ತಿರದ ಪ್ರತಿಕ್ರಿಯೆ ಮತ್ತು ಅವರ ಜೊತೆಗಿನ ಕೆಲಸ ಅವರ ಉತ್ಪನ್ನಗಳಿಗೆ ಮೌಲ್ಯವನ್ನು ಕೂಡಿಸುತ್ತದೆ.
ಶೈಕ್ಷಣಿಕ ಸಂದರ್ಶನಗಳು: ಸಿದ್ಧಾಂತ ಮತ್ತು ಅನುಷ್ಠಾನದ ಸಂಯೋಜನೆಯ ಕಲಿಕೆಗಾಗಿ ವಿದ್ಯಾರ್ಥಿಗಳು ನಿರಂತರವಾಗಿ ಉದ್ದಿಮೆಗಳ ಘಟಕಗಳಿಗೆ ಭೇಟಿ ನೀಡುತ್ತಾರೆ. ಅವರು ಅಧುನಿಕ ಫ್ಯಾಶನ್ ಪ್ರವೃತ್ತಿಯನ್ನು ಸರಿಸಮಾನವಾಗಿ ತಿಳಿಯಲು ವಸ್ತು ಸಂಗ್ರಹಾಲಯ, ಕಲಾ ಚಿತ್ರಶಾಲೆ, ವಸ್ತು ಪ್ರದರ್ಶನ ಮತ್ತು ವಾಣಿಜ್ಯ ಜಾತ್ರೆಗಳಿಗೆ ಭೇಟಿ ಕೊಡುತ್ತಾರೆ.
ಉದ್ದಿಮೆಯ ಇಂಟರ್ನ್‌ಶಿಪ್: ವಿದ್ಯಾರ್ಥಿಗಳು 6ರಿಂದ 8 ವಾರಗಳ ತನಕ ಉದ್ದಿಮೆಯ ಒಳಗಿದ್ದುಕೊಂಡು ಉದ್ದಿಮೆಯ ವಿನ್ಯಾಸ ಮತ್ತು ಕಾರ್ಯ ಸಂಬಂಧಿತ ಅಂಶಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ಇಂಟರ್ನ್‌ಶಿಪ್‌ನ ಅವಧಿಯಲ್ಲಿ, ವಿದ್ಯಾರ್ಥಿಗಳು ನೈಜ ಉದ್ದಿಮೆಯ ಸನ್ನಿವೇಶವನ್ನು ಅಳವಡಿಸಿಕೊಳ್ಳಲು ಕಲಿಯುತ್ತಾರೆ, ಮತ್ತು ಅವರಿಗೆ ಕ್ರಿಯಾತ್ಮಕ ಯೋಜನೆಯನ್ನು (ಪ್ರಾಜೆಕ್ಟ್) ವಹಿಸಲಾಗಿರುತ್ತದೆ, ಅದು ಅವರನ್ನು ನೈಜ ಪರಿಸರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಿದ್ಧ ಮಾಡುತ್ತದೆ. ಈ ಇಂಟರ್ನ್ ಶಿಪ್ ವಿದ್ಯಾರ್ಥಿ ಮತ್ತು ಉದ್ದಿಮೆಯ ನಡುವಿನ ಸಂಬಂಧವನ್ನು ಬಲಪಡಿಸಲು ಕೂಡ ಸಹಾಯ ಮಾಡುತ್ತದೆ.
ಡಿಸೈನ್ (ವಿನ್ಯಾಸ) ಸಂಗ್ರಹ/ಡಿಪ್ಲೊಮ ಪ್ರಾಜೆಕ್ಟ್: ವಿದ್ಯಾರ್ಥಿಗಳು ಕೈಗೊಂಡ ಪದವಿಯ ಪ್ರಾಜೆಕ್ಟ್ ಕಲಿಕೆಯ ಸಮಯದಲ್ಲಿ ಅಳವಡಿಸಿಕೊಂಡ ವಿವಿಧ ಕೌಶಲ್ಯವನ್ನು ಆವರಿಸಿರುತ್ತದೆ. ಉದ್ದಿಮೆ-ಪ್ರಾಯೋಜಿತ ಪ್ರಾಜೆಕ್ಟ್ ಶೈಕ್ಷಣಿಕ ಕಲಿಕೆಯನ್ನು ವಿಸ್ತೃತಗೊಳಿಸಲು ಮತ್ತು ಪ್ರದರ್ಶಿಸಲು ಸ್ಪರ್ಧಾತ್ಮಕ ವೇದಿಕೆಯನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ.
ಹೊಸದು ಏನಿದೆ?
ವಿವರಣೆ ೧
ವಿವರಣೆ ೨
ಸಮಾಚಾರ ಮತ್ತು ಸನ್ನಿವೇಶ
ವಿವರಣೆ ೧
ವಿವರಣೆ ೨
ವ್ಯವಹಾರದ ಅವಕಾಶ
ವಿವರಣೆ ೧
ವಿವರಣೆ ೨
|