ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ

     
 
     
      ಶೈಕ್ಷಣಿಕ        
 
sign up for e-zine  
 
 

 

ಪದವಿ ಕಾರ್ಯಕ್ರಮಗಳು - ಸ್ನಾತಕೋತ್ತರ ಕಾರ್ಯಕ್ರಮಗಳು
 
 
ಪದವಿ ಕಾರ್ಯಕ್ರಮಗಳು - ವಿನ್ಯಾಸ (ಡಿಸೈನ್)

 
ಬಿ. ಡಿಸ್ (ಫ್ಯಾಶನ್ ಡಿಸೈನ್)
ಬಿ. ಡಿಸ್ (ಲೆಧರ್ ಡಿಸೈನ್) 
ಬಿ. ಡಿಸ್ (ಅಕ್ಸಸರಿ ಡಿಸೈನ್) 
ಬಿ. ಡಿಸ್ (ಟೆಕ್ಸ್‌ಟೈಲ್ ಡಿಸೈನ್) 
ಬಿ. ಡಿಸ್ (ನಿಟ್‌ವೇರ್ ಡಿಸೈನ್) 
ಬಿ. ಡಿಸ್ (ಫ್ಯಾಶನ್ ಕಮ್ಯುನಿಕೇಷನ್) 

 
ಪದವಿ ಕಾರ್ಯಕ್ರಮ - ತಂತ್ರಜ್ಞಾನ
 
ಬಿ. ಎಫ್‌ಟೆಕ್ (ಅಪರೆಲ್ ಪ್ರೆಡಕ್ಷನ್)
 

ಬಿ. ಡಿಸ್ (ಅಕ್ಸಸರಿ ಡಿಸೈನ್)

 

ಬಿ. ಡಿಸ್ (ನಿಟ್‌ವೇರ್ ಡಿಸೈನ್)
 
ನಿಟ್‌ವೇರ್ ಡಿಸೈನ್ ಹೊಸ ಪ್ರಪಂಚದ ವ್ಯವಸ್ಥೆಯಲ್ಲಿ ಬೆಳವಣಿಗೆಯ ಕ್ಷೇತ್ರವಾಗಿ ಹೊರಹೊಮ್ಮಿದೆ. ಫ್ಯಾಶನ್ ಮತ್ತು ಟೆಕ್ಸ್‌ಟೈಲ್ಸ್‌ನ ವಿಭಾಗದಿಂದ ಅವಕಾಶ ನೀಡಲಾಗಿರುವ ನಿಟ್‌ವೇರ್ ಡಿಸೈನ್ ವಿಶಿಷ್ಟತೆಯು ಭಾರತೀಯ ಹೆಣಿಗೆ ಉದ್ಯಮದ ಭವಿಷ್ಯದ ಅಗತ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಚನೆಗೊಂಡಿದೆ. ಶಿಮ ಸೈಕಿ ಮತ್ತು ಸ್ಟೊಲ್‌ನಂತಹ ಗಣಕೀಕೃತ ಸಮತಲವಾದ ಹಾಸಿಗೆಯ ಹೆಣಿಗೆ ಯಂತ್ರಗಳ ಸ್ಟೇಟ್-ಆಫ್-ದಿ-ಆರ್ಟ್ ಉಪಕರಣದೊಂದಿಗೆ ಕೆಲಸ ಮಾಡುವ ಅವಕಾಶವನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ. ಸುತ್ತೋಲೆಯಲ್ಲಿರುವ ತಂತ್ರಗಳು ಮತ್ತು ಪರಿವರ್ತನೆಗಳು ಮತ್ತು ಸಮತಲ ಹೆಣಿಗೆ ತಯಾರಿಕ ತಂತ್ರಗಳು, ಸಾಧ್ಯತೆಯ ರಚನೆ ಅಭಿವೃದ್ಧಿಗಳು, ಕಾರ್ಯವಿಧಾನಗಳು ಮತ್ತು ಉಡುಪು ತಯಾರಿಕೆಗೂ ಅವರು ಪ್ರದರ್ಶನ ತೋರುತ್ತಾರೆ.
 
ವಿಷಯ
 
ವರ್ಷ ೧
ವಿನ್ಯಾಸದಲ್ಲಿ ಸಾಮಾನ್ಯ ಸಂಸ್ಥಾಪನಾ ಕಾರ್ಯಕ್ರಮಗಳು
 
ವರ್ಷ ೨
ಫ್ಯಾಶನ್ ಕಲೆ ಮತ್ತು ನಿದರ್ಶನ, ಮೂಲ ನೆಯ್ಗೆ ಮತ್ತು ಕೈ ಹೆಣಿಗೆ, ಜವಳಿ ವಿಜ್ಞಾನ, ಪರಿಷ್ಕರಣೆ ಮತ್ತು ಹೆಣಿಗೆ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುವುದು. ಕಂಪ್ಯೂಟರ್ ಅಪ್ಲಿಕೇಷನ್ಸ್, ಸಾಂಪ್ರದಾಯಿಕ ಜವಳಿಗಳು, ಮಾದರಿ ತಯಾರಿ ಮತ್ತು ನಿರ್ಮಾಣ, ಮೇಲ್ಮೈ ತಂತ್ರಗಳು ಮತ್ತು ಉತ್ಪನ್ನ ಅಭಿವೃದ್ಧಿ ಯೋಜನೆಗಳಲ್ಲೂ ಅವರು ವಿಷಯಗಳನ್ನು ಪಡೆಯುತ್ತಾರೆ. ಎರಡನೇ ವರ್ಷ ಉದ್ಯಮ ಇಂಟರ್ನ್‌ಶಿಪ್‌ನೊಂದಿಗೆ ಕೊನೆಯಾಗುತ್ತದೆ.
 
ವರ್ಷ ೩
ಫ್ಯಾಶನ್ ಕಲೆ ಮತ್ತು ನಿದರ್ಶನ, ಮಾದರಿ ತಯಾರಿ, ಡ್ರ್ಯಾಪಿಂಗ್ ಮತ್ತು ನಿರ್ಮಾಣ, ಗಣಕೀಕೃತ ಹೆಣಿಗೆ, ಉತ್ಪನ್ನ ಅರಿವು, ಮಾರಾಟದ ಸರಕು ಮತ್ತು ಮಾರುಕಟ್ಟೆ ಮತ್ತು ಆಧುನಿಕ ಹೆಣಿಗೆ ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ವಿಷಯಗಳನ್ನು ಪಡೆಯುತ್ತಾರೆ. ಇತರ ವಿನ್ಯಾಸ ಯೋಜನೆಗಳೊಂದಿಗೆ ಕುಶಲಕಲೆಯ ಸಮೀಕ್ಷೆ ಮತ್ತು ಸಾಕ್ಷ್ಯಚಿತ್ರ ಯೋಜನೆಯನ್ನೂ ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಾರೆ.
 
ವರ್ಷ ೪
ಉದ್ಯಮದ ಬಗ್ಗೆ ಅವರ ತಿಳಿವಳಿಕೆಗೆ ಉತ್ತಮ ರೀತಿಯಲ್ಲಿ ಹೊಂದಿಸಿಕೊಳ್ಳಲು ಮತ್ತು ವೈಯಕ್ತಿಕ ಸಂಶೋಧನೆ ಮಾಡುವಂತಹ ಯೋಜನೆಗಳನ್ನೂ ಮಾಡುವಂತಹ ಹಲವು ಆಯ್ಕೆಯ ವಿಷಯಗಳನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಾರೆ. ಅಂತಿಮ ಸೆಮಿಸ್ಟರ್‌ನಲ್ಲಿ, ಉದ್ಯಮದ ಗ್ರಾಹಕರು, ರಫ್ತು ಗೃಹ, ವಿನ್ಯಾಸಗಾರ ಅಥವಾ ಎನ್‌ಜಿಒದೊಂದಿಗೆ ಪದವಿ ಯೋಜನೆಯನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಾರೆ. ಈ ಅವಧಿಯಲ್ಲಿ ಪ್ರಾಯೋಜಕರಿಂದ ನೀಡಲಾದ ವಿವರಣೆಯ ಮೇಲೆ ವಿದ್ಯಾರ್ಥಿಗಳು ಕೆಲಸ ಮಾಡುವ ಅಗತ್ಯವಿರುತ್ತದೆ. ಪದವಿಯ ಪ್ರದರ್ಶನದಲ್ಲಿ ಈ ಕಾರ್ಯಕ್ರಮ ಸಮಾಪ್ತಿಯಾಗುತ್ತದೆ.
 
ವೃತ್ತಿಗಳು
ಸುತ್ತೋಲೆಗಳ ಸವಾಲುಗಳು ಮತ್ತು ದೇಶಿಯ ಮತ್ತು ರಫ್ತು ಕ್ಷೇತ್ರಗಳಲ್ಲಿ ಸಮತಲ ಹಾಸಿಗೆ ಹೆಣಿಗೆಯನ್ನು ನಿರ್ವಹಿಸಲು ಉತ್ತಮ ಸಮರ್ಪಕ ವೃತ್ತಿಪರರನ್ನು ರಚಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ವಿನ್ಯಾಸಗಾರರು, ಕ್ರಿಯಾತ್ಮಕ ವ್ಯವಸ್ಥಾಪಕರು, ಸರಕು ಮಾರಾಟಗಾರರು, ಪ್ರೆಡಕ್ಷನ್ ಮ್ಯಾನೇಜರ್‌ಗಳು ಮತ್ತು ಉದ್ಯಮಿಗಳಾಗಿ ಅವರು ತಮ್ಮ ವೃತ್ತಿಗಳನ್ನು ಪಡೆಯಬಹುದಾಗಿದೆ.
 
ಸ್ಟಾರ್ ಉದ್ಯಮಿಗಳು (ಉದ್ಯೋಗದಾತರು)
ಮದುರ ಗಾರ್ಮೆಂಟ್ಸ್, ಐಟಿಸಿ ಎಲ್‌ಆರ್‌ಬಿಡಿ, ಗ್ಯಾಪ್, ಟ್ರೈಬರ್ಗ್, ರೇಮಂಡ್, ಗುಪ್ತ ಎಕ್ಸಿಮ್, ಕ್ಯಾಸ್ಕೇಡ್ ಎಂಟರ್‌ಪ್ರೈಸಸ್, ಪ್ರತಿಭಾ ಸಿಂಟೆಕ್ಸ್, ನಹರ್ ಗ್ರೂಪ್ ಆಫ್ ಇಂಡಸ್ಟ್ರೀಸ್, ಎಸ್‌ಪಿಎಲ್ ಇಂಡಸ್ಟ್ರೀಸ್, ರಾಜ ಹೊಸೈರಿ, ಒಸ್ವಾಲ್ ವುಲನ್ ಮಿಲ್ಸ್, ಯುನಿ ಸ್ಟೈಲ್ ಇಮೇಜಸ್, ಇಂಡಿಯನ್ ಟೆರೇನ್, ಇಂಪಲ್ಸ್ ಅಂತಾರಾಷ್ಟ್ರೀಯ, ಅರವಿಂದ್ ಬ್ರ್ಯಾಂಡ್ಸ್, ಓರಿಯಂಟ್ ಕ್ರಾಫ್ಟ್, ಲಕ್ರ ಬ್ರದರ್‍ಸ್, ಮ್ಯಾಟ್ರಿಕ್ಸ್, ಆರ್‌ಎಂಎಸ್ ಜೊಸ್ ಇತ್ಯಾದಿ.