ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ

     
 
     
      ಸೌಲಭ್ಯಗಳು        
 
sign up for e-zine  
 
 

ಸೌಲಭ್ಯಗಳು  ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ(ರಾಷ್ಟ್ರೀಯ ಫ್ಯಾಶನ್ ತಂತ್ರಜ್ಞಾನ ಸಂಸ್ಥೆ)ಯು ಒಂದು ವಿನ್ಯಾಸ, ನಿರ್ವಹಣೆ ಮತ್ತು ತಂತ್ರಜ್ಞಾನದ  ಶೈಕ್ಷಣಿಕ ಸಂಸ್ಥೆಯಾಗಿದ್ದು, ಫ್ಯಾಶನ್ ಉದ್ಯಮಕ್ಕೆ ಹೋಗುವ ವೃತ್ತಿಪರರ ಗುಣಮಟ್ಟಕ್ಕಾಗಿ ಮೈಲುಗಲ್ಲನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ ಮತ್ತು ಪ್ರಾಯೋಗಿಕ  ಮತ್ತು ಪಠ್ಯ ಅಧ್ಯಯನ ಎರಡರ ತರಬೇತಿಯನ್ನು ಪಡೆದುಕೊಳ್ಳುವ ಸಲುವಾಗಿ ಸಮಗ್ರವಾದ ಮತ್ತು ಅತ್ಯಾಧುನಿಕ ವಿಧಾನದ ಮೂಲಭೂತ ಸೌಕರ್ಯಗಳನ್ನು  ಮತ್ತು ಉಪಕರಣಗಳನ್ನು ಸಂಸ್ಥೆ ಒದಗಿಸಿದೆ. ವಿದ್ಯಾರ್ಥಿಗಳಿಗೆ ನೀಡಲಾಗಿರುವ ಸೌಲಭ್ಯಗಳು ಮತ್ತು ಸೇವೆಗಳು ಅವರಿಗೆ ಪ್ರಾಯೋಗಿಕ ಪರೀಕ್ಷೆ ಮತ್ತು ಕ್ರಿಯಾತ್ಮಕ  ವಿಚಾರಗಳನ್ನು ಬೆಳೆಸಿಕೊಳ್ಳುವ ಸ್ವಾತಂತ್ರ್ಯ ನೀಡುತ್ತವೆ.     ಎನ್‌ಐಎಫ್‌ಟಿಯಲ್ಲಿ, ಪ್ರಪಂಚದಲ್ಲಿ ಉತ್ತಮವೆನಿಸುವುದಕ್ಕೆ ಸಮಾನವಾದ ಸೌಲಭ್ಯಗಳೊಂದಿಗೆ ಭರ್ತಿಯಾಗಿರುವ ಉಲ್ಲಾಸದ ಮತ್ತು ಸ್ಪಂದನ ಶೀಲವಾದ  ಕ್ಯಾಂಪಸ್ ಇದೆ. ಉಪನ್ಯಾಸ ಕೋಣೆಗಳು, ವಿನ್ಯಾಸ ಸ್ಟುಡಿಯೋಗಳು ಮತ್ತು ಪ್ರಯೋಗಾಲಯಗಳು, ಸಂಪನ್ಮೂಲ ಕೇಂದ್ರಗಳು, ಚಟುವಟಿಕೆ ಕೇಂದ್ರಗಳು ಮತ್ತು  ವಿದ್ಯಾರ್ಥಿನಿಲಯಗಳಿಂದ ಎಲ್ಲ ಎನ್‌ಐಎಫ್‌ಟಿ ಕಟ್ಟಡಗಳು ಸಂಪೂರ್ಣವಾಗಿ ತುಂಬಿರುವಂತೆ ಕ್ರಿಯಾತ್ಮಕ ವಾಸ್ತುಶಾಸ್ತ್ರದ ಮತ್ತು ವಿಶಾಲವಾದ ಆವರಣ  ವಿವರಿಸುತ್ತದೆ. ಪ್ರಾಯೋಗಿಕ ಸ್ಥಾಪನೆಗಳು ಮತ್ತು ಕಲಾ ತಂತ್ರಜ್ಞಾನದ ಮೂಲಕ ಸ್ವಂತ ಅನುಭವ ಪಡೆಯುವುದಕ್ಕೆ ಶಿಕ್ಷಣ ರಚನೆ ಪ್ರಾಮುಖ್ಯತೆ ನೀಡುತ್ತದೆ.    

ವಿನ್ಯಾಸ ಸ್ಟುಡಿಯೋಗಳು ಮತ್ತು ತಾಂತ್ರಿಕ ಪ್ರಯೋಗಾಲಯಗಳ ‘ರಚನೆ’  ಪ್ರಾಯೋಗಿಕ ಪರೀಕ್ಷೆ ಮತ್ತು ನವೀನತೆಗೆ ವಿದ್ಯಾರ್ಥಿಗಳಿಗೆ ವಿಪುಲವಾದ ಅವಕಾಶವನ್ನು ಕ್ಯಾಂಪಸ್‌ನಲ್ಲಿರುವ ವಿನ್ಯಾಸ ಸ್ಟುಡಿಯೋಗಳು ಒದಗಿಸಿವೆ. ಹಾಗೆಯೇ  ಉದ್ಯಮದ ನೈಜ ಸಮಯದ ವಿಷಯಗಳನ್ನು ಒಳಗೊಂಡಿರುವ ಉನ್ನತ ತಂತ್ರಜ್ಞಾನ ಕಾರ್ಯ ಪ್ರದೇಶಗಳನ್ನು ಪ್ರಯೋಗಾಲಯಗಳು ಒದಗಿಸಿವೆ.    

ಉನ್ನತ ಗುಣಮಟ್ಟ ಉಪನ್ಯಾಸ ಕೋಣೆಗಳು     ಉತ್ತಮವಾದ ಉಪಕರಣಗಳನ್ನು ಹೊಂದಿರುವ ಉಪನ್ಯಾಸ ಕೋಣೆಗಳು ಉನ್ನತವಾದ ಪರಸ್ಪರವಾದ ಸೆಷನ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಆಧುನಿಕ ಬೋಧನಾ  ವಿಧಾನಶಾಸ್ತ್ರವನ್ನು ಬಳಸುತ್ತವೆ.    

ಐಟಿ ಜ್ಞಾನದ ಶಿಕ್ಷಣ     ಅರ್ಥಪೂರ್ಣವಾದ ಮಾರ್ಗದಲ್ಲಿ ಫ್ಯಾಶನ್ ಮತ್ತು ಮಾಹಿತಿ ತಂತ್ರಜ್ಞಾನವನ್ನು ಒಗ್ಗೂಡಿಸಲು ಅವರ ಸಾಮರ್ಥ್ಯದ ಮೇಲೆ ಫ್ಯಾಶನ್ ವೃತ್ತಿಪರರ ಯಶಸ್ಸು ಆzs ರವಾಗಿರುತ್ತದೆ. ಎನ್‌ಐಎಫ್‌ಟಿಯ ಎಲ್ಲ ಕೇಂದ್ರಗಳಲ್ಲಿ ಐಟಿ ಬೆಂಬಲ ಒಂದು ಗಂಭೀರವಾದ ಗುಣಲಕ್ಷಣವಾಗಿದೆ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು  ಅತ್ಯಾಧುನಿಕ ವಿಧಾನದ ಹಾರ್ಡ್‌ವೇರ್ (ಯಂತ್ರಾಶ) ಮತ್ತು ಸಾಫ್ಟ್‌ವೇರ್(ತಂತ್ರಾಂಶ)ಗಳನ್ನು ಹೊಂದಿವೆ.    

ಸಂಪನ್ಮೂಲ ಕೇಂದ್ರ  ನವದೆಹಲಿಯ ರಾಷ್ಟ್ರೀಯ ಸಂಪನ್ಮೂಲ ಕೇಂದ್ರ ಮತ್ತು ಪ್ರತಿ ಎನ್‌ಐಎಫ್‌ಟಿ ಕೇಂದ್ರದ ಸಂಪನ್ಮೂಲ ಕೇಂದ್ರ ಮಾಹಿತಿ ಮತ್ತು ಜ್ಞಾನದ ನಿರ್ವಹಣೆಯ ಸ್ತಂಭಗಳಾಗಿವೆ. ಅಂತಾರಾಷ್ಟ್ರೀಯ ಮತ್ತು ಸಮಕಾಲೀನ ಭಾರತೀಯ ಫ್ಯಾಶನ್‌ನ ಅಧ್ಯಯನಕ್ಕಾಗಿ ಭಾರತದಲ್ಲಿ ಲಭ್ಯವಿರುವ ಮಾಹಿತಿಯ ವ್ಯವಸ್ಥಾತ್ಮಕವಾಗಿರುವ ದಾಖಲಿತ  ಮೂಲವಷ್ಟರ ಮುದ್ರಣ, ದೃಶ್ಯ ಮತ್ತು ಕ್ರಿಯಾತ್ಮಕ ಸಾಮಾಗ್ರಿ ಸಂಪನ್ಮೂಲಗಳ ಸಂಯೋಜನೆಯ ಸಂಗ್ರಹವನ್ನು ಪ್ರತಿ ಸಂಪನ್ಮೂಲ ಕೇಂದ್ರಗಳು ಹೊಂದಿವೆ. ವಿನ್ಯಾಸ  ಸಮುದಾಯ, ಉದ್ಯಮ ವೃತ್ತಿಗಾರರು ಮತ್ತು ಉದ್ಯಮಿಗಳಿಗೆ ಮಾಹಿತಿ ಸೇವೆಗಳನ್ನೂ ಸಂಪನ್ಮೂಲ ಕೇಂದ್ರಗಳು ಒದಗಿಸುತ್ತವೆ.    

ಸಂಪನ್ಮೂಲ ಕೇಂದ್ರಗಳ ಸಂಗ್ರಹಗಳು ಸೇರಿವೆ :     
.ಪುಸ್ತಕಗಳು ಮತ್ತು ಪತ್ರಿಕೆಗಳು 
.ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಫ್ಯಾಶನ್ ಮತ್ತು ಜವಳಿ ಪತ್ರಿಕೆಗಳು 
.ಶ್ರವ್ಯ-ದೃಶ್ಯಗಳು 
. ವೈಎಸ್‌ಎಲ್, ಚನೆಲ್, ಅರ್ಮಾನಿ, ಕ್ರಿಶ್ಚಿಯನ್ ಡಿಯೋರ್, ಡೊಲ್ಸ್ ಆಂಡ್ ಗಬ್ಬನ ಇತ್ಯಾದಿಯ ಅಂತಾರಾಷ್ಟ್ರೀಯ ಸಂಗ್ರಹಗಳು. 
. ರಿತು ಕುಮಾರ್, ಹೆಮಂತ್ ತ್ರಿವೇದಿ, ರೋಹಿತ್ ಬಲ್, ಸುನಿತ್ ವರ್ಮ ಇತ್ಯಾದಿಯ ಭಾರತೀಯ ಸಂಗ್ರಹಗಳು ಮತ್ತು ಎನ್‌ಐಎಫ್‌ಟಿ ವಿದ್ಯಾರ್ಥಿಗಳ  ಸಂಗ್ರಹಗಳು. 
. ಜವಳಿ ಸಂಗ್ರಹಗಳು.     

ಸೇವೆಗಳ ಅವಕಾಶ:  . ಅವಲೋಕನ ಸೇವೆ  . ಆನ್‌ಲೈನ್ ಪಬ್ಲಿಕ್ ಆಕ್ಸೆಸ್ ಕ್ಯಾಟೆಲಾಗ್ (ಒಪಿಎಸಿ)     . ಬಿಬ್ಲಿಯೋಗ್ರಾಫಿಕ್ ಸೇವೆ  . ಇಂಡೆಕ್ಸಿಂಗ್ ಸೇವೆ  . ಪ್ರಸಾರ ಸೇವೆ     . ರಿಪ್ರೆಗ್ರಾಫಿಕ್ ಸೇವೆ.  . ಬಣ್ಣದ ಸೇವೆ    

ಸಮಾವೇಶ ಸಭಾಂಗಣಗಳು  ಪ್ರದರ್ಶನಗಳು, ಪರಸ್ಪರ ಮತ್ತು ಚರ್ಚೆಗಳಿಗಾಗಿ ಪರಿಪೂರ್ಣವಾದ ಸಭೆಯ ಸ್ಥಳಗಳಂತೆ ಸೇವೆ ಮಾಡುವ ವಿಶಾಲವಾದ ಸಮಾವೇಶ / ವಿಚಾರಗೋಷ್ಠಿಗಳ  ಸಭಾಂಗಣಗಳನ್ನು ಸಂಸ್ಥೆ ಹೊಂದಿದೆ.    

ಶೋಕಾಸ್  ವಿದ್ಯಾರ್ಥಿಗಳಿಗೆ ಪ್ರದರ್ಶನ ಮತ್ತು ಸಂಗ್ರಹ ತೋರ್ಪಡಿಸುವಿಕೆಗೆ ಎನ್‌ಐಎಫ್‌ಟಿಯ ಕೇಂದ್ರಗಳಲ್ಲಿರುವ ಆಂಫಿಥಿಯೇಟರ್‍ಸ್ ಮತ್ತು ಆಡಿಟೋರಿಯ ಆದರ್ಶ ವಾಗಿದೆ.    

ಮನರಂಜನೆ ಸ್ಥಳ  ವಿದ್ಯಾರ್ಥಿ ಚಟುವಟಿಕೆಯ ಕ್ಲಬ್‌ಗಳಾದ ಕಲ್ಟರಲ್ ಆಂಡ್ ಡ್ರಮ್ಯಾಟಿಕ್ ಕ್ಲಬ್, ಸ್ಪೋರ್ಟ್ಸ್, ಅಡ್ವೆಂಚರ್ ಆಂಡ್ ಫೋಟೊಗ್ರಫಿ ಕ್ಲಬ್, ಲಿಟರರಿ ಕ್ಲಬ್ ಮತ್ತು  ಎನ್ವಿರೋನ್‌ಮೆಂಟ್ ಆಂಡ್ ಸೋಶಿಯಲ್ ಸರ್ವೀಸ್ ಕ್ಲಬ್‌ಗಳು ವ್ಯವಸ್ಥಿತವಾದ ಆಧಾರದ ಮೇಲೆ ವಿಶಾಲವ್ಯಾಪ್ತಿಯ ಮನರಂಜನೆ, ಕ್ರೀಡೆ ಮತ್ತು ವಿರಾಮ  ಚಟುವಟಿಕೆಗಳ ವ್ಯವಸ್ಥೆ ಮಾಡುತ್ತವೆ. ಸಮಾರಂಭಗಳನ್ನು ನಡೆಸಲು ವಿಶಾಲವಾದ ಸ್ಥಳವನ್ನು ಎನ್‌ಐಎಫ್‌ಟಿ ಕ್ಯಾಂಪಸ್ ಹೊಂದಿದ್ದು, ಅದು ವಿದ್ಯಾರ್ಥಿಗಳಿಗೆ  ಅವರ ವೈಯಕ್ತಿಕ ಆಸಕ್ತಿಗಳನ್ನು ಮುಂದುವರಿಸಲು ಮತ್ತು ಸಾಮಾಜಿಕ ಕಾಳಜಿಗಳೆಡೆ ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತದೆ.    

ವಿಶ್ರಾಂತಿ (ಚಿಲ್ ಔಟ್)  ವಿದ್ಯಾರ್ಥಿಗಳಿಗೆ ವಿಶ್ರಾಂತಿ ನೀಡಲು ಮತ್ತು ಅವರ ವರಿಷ್ಠರೊಂದಿಗೆ ಪರಸ್ಪರ ಸಮಾಲೋಚನೆ ನಡೆಸಲು ಉಪಹಾರ ಗೃಹಗಳನ್ನು ಆದರ್ಶವಾಗಿಸಲು  ವೈವಿಧ್ಯಮಯ ಆಹಾರ ಮತ್ತು ಸ್ನೇಹದ ವಾತಾವರಣವಿದೆ.    

ಹೆಲ್ತ್ ಕೇರ್  ಕ್ಯಾಂಪಸ್ ಮೇಲೆ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗಿದೆ. ಸಾಮಾನ್ಯ ಮತ್ತು ನಿರ್ದಿಷ್ಟವಾದ ರೋಗಗಳ ಬಗ್ಗೆ ಕಾಳಜಿ ವಹಿಸಲು ವೈದ್ಯರು ಮತ್ತು ನರ್ಸ್ (ಆಯ)ಗಳು  ದೊರೆಯುತ್ತಾರೆ. ವಿದ್ಯಾರ್ಥಿಗಳಿಗೆ ಸಲಹೆ ನೀಡಲು ಕ್ಯಾಂಪಸ್ ಮೇಲೆ ಮನಃಶಾಸ್ತ್ರರೂ ಲಭ್ಯವಿರುತ್ತಾರೆ.    

ವಿದ್ಯಾರ್ಥಿನಿಲಯಗಳು (ಹಾಸ್ಟಲ್‌ಗಳು)  ಎನ್‌ಐಎಫ್‌ಟಿಯು ತನ್ನ ಎಲ್ಲ ಕೇಂದ್ರಗಳಲ್ಲೂ ಯುವತಿಯರಿಗೆ ವಸತಿ ಸೌಲಭ್ಯ ಒದಗಿಸಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬಯಿ ಮತ್ತು ರೇ ಬ ರೇಲಿಯಲ್ಲಿನ ಕ್ಯಾಂಪಸ್‌ನೊಳಗೆ ಶಾಶ್ವತವಾದ ವಿದ್ಯಾರ್ಥಿನಿಲಯದ ಸೌಲಭ್ಯಗಳು ದೊರೆಯುತ್ತವೆ. ನವದೆಹಲಿ, ಕೊಲ್ಕತ್ತ ಮತ್ತು ಗಾಂಧಿನಗರದಲ್ಲಿ ಕ್ಯಾಂಪಸ್  ವಿದ್ಯಾರ್ಥಿನಿಲಯಗಳ ಸೌಲಭ್ಯಗಳನ್ನು ಎನ್‌ಐಎಫ್‌ಟಿ ಹೊಂದಿಲ್ಲದಿದ್ದರೂ, ಯುವತಿಯರಿಗೆ ಬೇಕಾದಷ್ಟು ವಸತಿ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.  ಲಾಭವಿಲ್ಲದ / ನಷ್ಟವಿಲ್ಲದ ಆಧಾರದ ಮೇಲೆ ಎನ್‌ಐಎಫ್‌ಟಿಯ ಎಲ್ಲ ವಿದ್ಯಾರ್ಥಿನಿಲಯಗಳು ನಡೆಯುತ್ತಿವೆ. ರೇ ಬರೇಲಿಯಲ್ಲಿ, ಕ್ಯಾಂಪಸ್ ವಿದ್ಯಾರ್ಥಿನಿಲಯ  ಸೌಲಭ್ಯವನ್ನು ಯುವಕರಿಗೂ ಮಾಡಲಾಗಿದೆ.     ಬಾಡಿಗೆಯ ಖಾಸಗಿ ವಸತಿ ಸೌಲಭ್ಯವೂ ಸೇರಿದಂತೆ ಎಲ್ಲ ವಿದ್ಯಾರ್ಥಿನಿಲಯ ಆವರಣಗಳಲ್ಲಿ ಹಗಲು ರಾತ್ರಿ ವೃತ್ತಿಪರವಾದ ಭದ್ರತೆ, ಕರೆ ಮೇರೆಗೆ ಬರುವ ವೈದ್ಯರು  ಮತ್ತು ಹಾಸ್ಟಲ್ ವಾರ್ಡನ್‌ಗಳನ್ನು (ನಿಲಯ ಪಾಲಕರು) ಒದಗಿಸಲಾಗಿದೆ, ಟಿ.ವಿ, ನಿಯತಕಾಲಿಕೆಗಳು, ಕೆಲವು ಒಳ ಮತ್ತು ಹೊರಗಿನ ಪಂದ್ಯಗಳಂತಹ  ಮನರಂಜನೆ ಸೌಲಭ್ಯಗಳೂ ವಿದ್ಯಾರ್ಥಿನಿಲಯಗಳಲ್ಲಿದೆ.