ಶುಲ್ಕ ರಚನಾ ಕ್ರಮ
ಸಾಮಾನ್ಯ ಅಥವಾ ಮೀಸಲಾತಿ ವಿಭಾಗಗಳಿಗಾಗಿ ಶುಲ್ಕ ರಚನೆ ಈ ಕೆಳಗಿನಂತಿದೆ :
. ಬೋಧನಾ ಶುಲ್ಕ : ಪ್ರತಿ ಸೆಮಿಸ್ಟರ್, ವಾಪಸಿಲ್ಲ
. ಭದ್ರತಾ ಠೇವಣಿ - ಪ್ರವೇಶದ ಸಮಯದಲ್ಲಿ ಭಾಗಶಃ ವಾಪಸು - ಭಾಗಶಃ ಪೂರ್ವ ವಿದ್ಯಾರ್ಥಿ ಸಂಘದ ಶುಲ್ಕ
. ಗ್ರಂಥಾಲಯ ಶುಲ್ಕ - ವಾರ್ಷಿಕ, ವಾಪಸಿಲ್ಲ
. ವೈದ್ಯಕೀಯ ಹಕ್ಕು ಸಾಧಿಸುವುದು ಮತ್ತು ವಿದ್ಯಾರ್ಥಿ ಅಭಿವೃದ್ಧಿ ಶುಲ್ಕ - ವಾರ್ಷಿಕ, ವಾಪಸಿಲ್ಲ
ಎನ್‌ಆರ್‌ಐ / ಎನ್‌ಆರ್‌ಐ ಬೆಂಬಲಿತ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕವನ್ನು ವಾರ್ಷಿಕವಾಗಿ (ಎರಡು ಸೆಮಿಸ್ಟರ್‌ಗಳಿಗಾಗಿ) ತೆಗೆದುಕೊಳ್ಳಲಾಗಿದೆ. ರಚನಾ ಕ್ರಮ ಈ ಕೆಳಗಿನಂತಿವೆ:
. ಬೋಧನಾ ಶುಲ್ಕ - ವಾಪಸಿಲ್ಲ
. ಗ್ರಂಥಾಲಯ ಶುಲ್ಕ - ವಾಪಸಿಲ್ಲ
. ವೈದ್ಯಕೀಯ ಹಕ್ಕು ಸಾಧಿಸುವುದು ಮತ್ತು ವಿದ್ಯಾರ್ಥಿ ಅಭಿವೃದ್ಧಿ ಶುಲ್ಕ - ವಾಪಸಿಲ್ಲ
ಜುಲೈ - ಡಿಸೆಂಬರ್ ೨೦೦೮ ಸೆಮಿಸ್ಟರ್‌ನ ಶುಲ್ಕ
ಜುಲೈ - ಡಿಸೆಂಬರ್ ೨೦೦೮ ಸೆಮಿಸ್ಟರ್‌ಗೆ ಅನ್ವಯವಾಗುವ ಶುಲ್ಕ ಕೆಳಗಿನಂತಿದೆ :
ಎನ್‌ಆರ್‌ಐ ವಿದ್ಯಾರ್ಥಿಗಳ ಹೊರತಾಗಿ ಸೆಮಿಸ್ಟರ್ - - I, III, V ಮತ್ತು VII
ಬೋಧನಾ ಶುಲ್ಕ - ೪೦,೦೦೦ ರೂ.
ಗ್ರಂಥಾಲಯ ಶುಲ್ಕ - ೩,೦೦೦ ರೂ.
ವಿದ್ಯಾರ್ಥಿ ಅಭಿವೃದ್ಧಿ ಮತ್ತು ವೈದ್ಯಕೀಯ ಹಕ್ಕು ಸಾಧಿಸುವುದು - ೧೨೫೦ ರೂ.
ಒಟ್ಟು - ೪೪೨೫೦ ರೂ.
ಹೆಚ್ಚುವರಿಯಾಗಿ, ಭದ್ರತೆಗಾಗಿ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳು ೫೦೦೦ ರೂ. ಗಳನ್ನು ಪಾವತಿಸುವ ಅಗತ್ಯವಿದೆ. ಈ ಮೊತ್ತದ ೨೫೦೦ ರೂ.ಗಳನ್ನು ಹಿಂತೆಗೆದುಕೊಳ್ಳುವ ನಮೂನೆ ಅಥವಾ ಕೋರ್ಸ್ ಪೂರ್ಣಗೊಂಡ ನಂತರ ವಾಪಸು ನೀಡಲಾಗುತ್ತದೆ. ಉಳಿದ ಹಣದಿಂದ ವಿದ್ಯಾರ್ಥಿಗಳಿಗಾಗಿ ಇರುವ ಎನ್‌ಐಎಫ್‌ಟಿ ಪೂರ್ವ ವಿದ್ಯಾರ್ಥಿಗಳ ಸಂಘದ ಜೀವನಾವಧಿಯ ಸದಸ್ಯತ್ವ ರಚನೆಯಾಗುತ್ತದೆ.
ಎನ್‌ಆರ್‌ಐ / ಎನ್‌ಆರ್‌ಐ ಪ್ರಾಯೋಜಿತ ವಿಭಾಗದ ವಿದ್ಯಾರ್ಥಿಗಳಿಗೆ ಶುಲ್ಕ : ಹೇಳಲಾಗಿರುವ ವಿಭಾಗದಡಿಯ ವಿದ್ಯಾರ್ಥಿಗಳಿಗೆ ಅನ್ವಯವಾಗುವ ಶುಲ್ಕವು ೩,೧೮,೫೦೦/-. ಭಾರತೀಯ ರೂಪಾಯಿಗಳಲ್ಲಷ್ಟೆ ಶುಲ್ಕವನ್ನು ಠೇವಣಿ ಮಾಡಿಕೊಳ್ಳಲಾಗುತ್ತದೆ.
ಶುಲ್ಕವನ್ನು ಠೇವಣಿ ಇಡಲು ಕೊನೆಯ ದಿನಾಂಕ ಆಗಸ್ಟ್ ೧೮, ೨೦೦೮ (ಶೈಕ್ಷಣಿಕ ಕ್ಯಾಲೆಂಡರ್ ಅನುಗುಣವಾಗಿ).
ತಡವಾದ ಶುಲ್ಕ ಪಾವತಿಗೆ ದಿನಕ್ಕೆ ೧೦೦ ರೂ. ನಂತೆ ಸೆಪ್ಟಂಬರ್ ೧, ೨೦೦೮ ರವರೆಗೆ ಠೇವಣಿ ಮಾಡಬಹುದು. ಅಧಿಕೃತ ಒಪ್ಪಿಗೆ ಇಲ್ಲದೆ ಶುಲ್ಕ ಪಾವತಿ ವಿಳಂಬವಾದರೆ ಸೆಪ್ಟಂಬರ್ ೨, ೨೦೦೮ ರಲ್ಲಿ ಸಂಸ್ಥೆಯ ದಾಖಲೆಯಿಂದ ವಿದ್ಯಾರ್ಥಿಯ ಹೆಸರು ಹೊರಗುಳಿಯುತ್ತದೆ.
ಸಬ್ಸಿಡಿ |