| |
| sign up for e-zine |
|
| Email -id |
|
|
|
|
ಪದವಿ ಕಾರ್ಯಕ್ರಮಗಳು ಸ್ನಾತಕೋತ್ತರ ಕಾರ್ಯಕ್ರಮಗಳು
ಉನ್ನತ ಪದವಿಯ ಕಾರ್ಯಕ್ರಮಗಳು:-
ಎ) ಫ್ಯಾಶನ್ ಮ್ಯಾನೇಜ್‌ಮೆಂಟ್ ನಲ್ಲಿ ಉನ್ನತ ಪದವಿ (ಎಮ್.ಎಫ್.ಎಮ್)
ಬಿ) ಫ್ಯಾಶನ್ ಟೆಕ್ನಾಲಜಿಯಲ್ಲಿ ಉನ್ನತ ಪದವಿ (ಎಮ್.ಎಫ್‌ಟೆಕ್.)
ಸಿ) ವಿನ್ಯಾಸದಲ್ಲಿ (ಡಿಸೈನ್) ಉನ್ನತ ಪದವಿ (ಎಮ್.ಡಿಇಎಸ್.)
ಪದವಿ ಕಾರ್ಯಕ್ರಮಗಳು - ಸ್ನಾತಕೋತ್ತರ ಕಾರ್ಯಕ್ರಮಗಳು
ಎಂ.ಡಿಸ್. (ಮಾಸ್ಟರ್ ಆಫ್ ಡಿಸೈನ್)
ಎಂ.ಎಫ್.ಎಂ (ಮಾಸ್ಟರ್ ಆಫ್ ಫ್ಯಾಶನ್ ಮ್ಯಾನೇಜ್‌ಮೆಂಟ್)
ಎಂ.ಎಫ್‌ಟೆಕ್ (ಮಾಸ್ಟರ್ ಆಫ್ ಫ್ಯಾಶನ್ ಟೆಕ್ನಾಲಜಿ)
ಎಂ.ಎಫ್.ಎಂ. (ಮಾಸ್ಟರ್ ಆಫ್ ಫ್ಯಾಶನ್ ಮ್ಯಾನೇಜ್‌ಮೆಂಟ್)
ಉಡುಪು ರಫ್ತು ಮತ್ತು ಫ್ಯಾಶನ್ ರಿಟೇಲ್ ವಲಯಗಳ ಅಗತ್ಯತೆಗಳಿಗೆ ಉತ್ತಮವಾಗಿ ಹೊಂದಿಕೊಳ್ಳುವ ಫ್ಯಾಶನ್ ವ್ಯಾಪಾರ, ಮಾರಾಟದ ಸರಕು ಮತ್ತು ರೇಟೆಲಿಂಗ್ ಕ್ಷೇತ್ರಗಳ ನಿರ್ವಹಣಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಧ್ಯೇಯೋದ್ದೇಶವನ್ನು ೧೯೮೭ ರಲ್ಲಿ ಫ್ಯಾಶನ್ ಮ್ಯಾನೇಜ್‌ಮೆಂಟ್‌ನಲ್ಲಿ ಎರಡು ವರ್ಷಗಳ ಮಾಸ್ಟರ್ ಕಾರ್ಯಕ್ರಮ ಹೊಂದಿದೆ. ಕಾರ್ಯಕ್ಷೇತ್ರಗಳ ಭೇಟಿಗಳು ಮತ್ತು ಉದ್ಯಮ ಇಂಟರ್ನ್‌ಶಿಪ್ ಮೂಲಕ ಕ್ರಿಯಾತ್ಮಕ ಮಾರಾಟದ ಸರಕು / ವ್ಯಾಪಾರ, ನವೀನತೆಯ ಫ್ಯಾಶನ್ ಮ್ಯಾನೇಜ್‌ಮೆಂಟ್ ಅಭ್ಯಾಸಗಳು, ಫ್ಯಾಶನ್ ಭವಿಷ್ಯ ಮತ್ತು ಪ್ರವೃತ್ತಿಗಳು ಮತ್ತು ಉದ್ಯಮ ರೂಢಿಗಳನ್ನು ವಿದ್ಯಾರ್ಥಿಗಳು ಎತ್ತಿ ತೋರಿಸುತ್ತಾರೆ.
ಈ ಕಾರ್ಯಕ್ರಮವು, ಯಾವುದೇ ಬೆಳೆಯುತ್ತಿರುವ ಸಂಸ್ಥೆಯ ಮಧ್ಯ ನಿರ್ವಹಣೆಯ ಅಂಗವಾಗಿರುವ ಸರಿಯಾದ ನಡವಳಿಕೆಯನ್ನು ವಿದ್ಯಾರ್ಥಿಗಳಿಗೆ ಒತ್ತಿ ಹೇಳಲಾಗುತ್ತದೆ.
ವಿಷಯ
ವರ್ಷ ೧
ಫ್ಯಾಶನ್ ಉದ್ಯಮದ ಮೇಲಿನ ಗಮನದೊಂದಿಗೆ ಮಾರ್ಕೆಟಿಂಗ್, ಮಾರಾಟದ ಸರಕು ಮತ್ತು ನಿರ್ವಹಣೆಯ ಪರಿಕಲ್ಪನೆಗಳು ಮತ್ತು ನಿಯಮಗಳನ್ನು ಮೊದಲ ವರ್ಷದ ಕಾರ್ಯಕ್ರಮಗಳಲ್ಲಿ ಪರಿಚಯಿಸಲಾಗುತ್ತದೆ. ಉತ್ಪನ್ನಕ್ಕೆ ಸಂಬಂಧಿಸಿದ ಜ್ಞಾನ ಮತ್ತು ಮಾರ್ಕೆಟಿಂಗ್ ಕೌಶಲ್ಯಗಳು ನಂಬಿಕೆಯ ಕ್ಷೇತ್ರಗಳು. ಮಾರ್ಕೆಟಿಂಗ್ ಸಂಶೋಧನೆ ಮತ್ತು ಗ್ರಾಹಕರ ನಡವಳಿಕೆ, ಜಾಗತಿಕ ಟೆಕ್ಸ್‌ಟೈಲ್ಸ್ ಮತ್ತು ಉಡುಗೆ ಉತ್ಪನ್ನ ಮಾರುಕಟ್ಟೆ ವೈಶಿಷ್ಟಗಳು, ಬಿಡಿ ಮಾರಾಟ ನಿರ್ವಹಣೆ ಮತ್ತು ಆಧುನಿಕ ರಫ್ತು ಮಾರಾಟದ ಸರಕು, ಗುಣಾತ್ಮಕ ತಂತ್ರಗಳು ಮತ್ತು ಕಾರ್ಯನಿರ್ವಹಣೆಗಳು, ಸಂಶೋಧನೆ ಮತ್ತು ಅಕೌಂಟ್ ನಿರ್ವಹಣೆಗಳು ಇತರ ಅಧ್ಯಯನದಲ್ಲಿ ಸೇರಿವೆ. ತರಗತಿ ಕೋಣೆಯ ಕಲಿಕೆಯನ್ನು ಪ್ರಾಯೋಗಿಕ ಅನುಭವದೊಂದಿಗೆ ಒಂದು ಗೂಡಿಸಲು ಅವರಿಗೆ ಉತ್ತೇಜನ ನೀಡುವ ಎಂಟು ವಾರಗಳ ಫ್ಯಾಶನ್ ಉದ್ಯಮ ಇಂಟರ್ನ್‌ಶಿಪ್ ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಸಂಸ್ಧೆಯ ಕ್ರಿಯಾಶೀಲತೆ ಕಡೆಗೆ ವರ್ಷದ ಅಂತ್ಯ ಭಾಗದಲ್ಲಿ ವಿದ್ಯಾರ್ಥಿಗಳು ತೋರಿಸುತ್ತಾರೆ.
ವರ್ಷ ೨
ಮೊದಲ ವರ್ಷದಲ್ಲಿ ಪಡೆದುಕೊಂಡ ಜ್ಞಾನ ಮತ್ತು ಕೌಶಲ್ಯಗಳ ಬಳಕೆಯ ಮೇಲೆ ಎರಡನೇ ವರ್ಷದಲ್ಲಿ ಪ್ರಾಮುಖ್ಯತೆ ನೀಡಲಾಗುತ್ತದೆ. ಮಾರ್ಕೆಟಿಂಗ್ ಕಾರ್ಯತಂತ್ರಗಳು ಮತ್ತು ಬ್ರ್ಯಾಂಡ್ ನಿರ್ವಹಣೆ, ಅಂತಾರಾಷ್ಟ್ರೀಯ ಮಾರ್ಕೆಟಿಂಗ್, ಫ್ಯಾಶನ್ ಭವಿಷ್ಯ ಮತ್ತು ಮತ್ತು ಉತ್ಪನ್ನ ಅಭಿವೃದ್ಧಿ, ಆರ್ಥಿಕ ನಿರ್ವಹಣೆ ಮತ್ತು ಅಂತಾರಾಷ್ಟ್ರೀಯ ಹಣಕಾಸು, ಮಾನವ ಸಂಪನ್ಮೂಲ ನಿರ್ವಹಣೆ, ಸರಬರಾಜು ಸರಪಳಿ ನಿರ್ವಹಣೆ ಮತ್ತು ಇ-ಉದ್ಯಮ, ಗ್ರಾಹಕ ಸಂಬಂಧ ನಿರ್ವಹಣೆ ಮತ್ತು ಗೋಚರಿಸುವ ಮಾರಾಟದ ಸರಕು ಅಧ್ಯಯನದ ಕಾರ್ಯಕ್ಷೇತ್ರಗಳಲ್ಲಿ ಸೇರಿವೆ. ಅಧ್ಯಯನ ಶಿಕ್ಷಣದ ಅಂಗವಾಗಿ, ವಿದ್ಯಾರ್ಥಿಗಳು ವಲಯದ ಅಧ್ಯಯನವನ್ನೂ ಮಾಡುತ್ತಾರೆ ಮತ್ತು ಗ್ರಾಮೀಣ ಅಭಿವೃದ್ಧಿ ಯೋಜನೆಗಳಲ್ಲೂ ತಾವು ಭಾಗಿಯಾಗುತ್ತಾರೆ. ಹಿಂದಿನ ಸೆಮಿಸ್ಟರ್‌ಗಳಲ್ಲಿ ಕಲಿತಿರುವುದನ್ನು ಒಂದುಗೂಡಿಸಲು ಕಂಪನಿಯಿಂದ ಪ್ರಾಯೋಜಕತ್ವದ ಪದವಿ ಸಂಶೋಧನೆ ಯೋಜನೆಯನ್ನೂ ಕೈಗೊಳ್ಳುತ್ತಾರೆ.
ವೃತ್ತಿಗಳು
ಅಂತಾರಾಷ್ಟ್ರೀಯ ಮಾರ್ಕೆಟಿಂಗ್, ಫ್ಯಾಶನ್ ಮಾರಾಟದ ಸರಕು, ಬ್ರ್ಯಾಂಡ್ ನಿರ್ವಹಣೆ, ಬಿಡಿ ಭಾಗ ಖರೀದಿ ಮತ್ತು ಜಾಗತಿಕ ಗುತ್ತಿಗೆ, ಉತ್ಪನ್ನ ಅಭಿವೃದ್ಧಿ, ರಿಟೇಲ್ ನಿರ್ವಹಣೆ, ಗೋಚರಿಸುವ ಮಾರಾಟದ ಸರಕು, ರಫ್ತು ಮಾರಾಟದ ಸರಕು, ಇತ್ಯಾದಿಗಳಲ್ಲಿ ವೃತ್ತಿಗಳನ್ನು ಪಡೆಯಲು ಬಯಸುವವರಿಗೆ ಈ ಕಾರ್ಯಕ್ರಮ ಭದ್ರವಾದ ವೇದಿಕೆಯನ್ನು ಒದಗಿಸಿದೆ.
ಸ್ಟಾರ್ ಉದ್ಯಮಿಗಳು (ಉದ್ಯೋಗದಾತರು)
ಅಡಿಡಸ್ ಗ್ರೂಪ್, ಆದಿತ್ಯ ಬಿರ್ಲಾ ಗ್ರೂಪ್, ಅಮೆರಿಕನ್ ಪೆಸಿಫಿಕ್ ಎಂಟರ್‌ಪ್ರೈಸಸ್, ಅರ್ಥುರ್ ಆಂಡರ್‌ಸನ್, ಅರವಿಂದ್ ಮಿಲ್ಸ್, ಆಶಿಮ ಗ್ರೂಪ್, ಬೆನೆಟನ್, ಬ್ಲಾಕ್‌ಬೆರ್ರಿಸ್, ಬುಸಾನ ಅಪರೆಲ್ ಗ್ರೂಪ್, ಕಾಲ್ವಿನ್ ಕ್ಲೈನ್, ಕ್ಯಾರೆಫೋರ್, ಕಲರ್‌ಪ್ಲಸ್, ಫ್ರ್ಯಾನ್ಸಿಸ್ ವಾಕ್‌ಜಿಯಾಂಗ್ ಪ್ರೈ. ಲಿ., ಗ್ಯಾಪ್ ಇಂಡಿಯಾ, ಗಿವೊ, ಇಂಡಿಯನ್ ಟೆರ್ರೇನ್ ಕ್ಲಾಥಿಂಗ್ ಪ್ರೈ. ಲಿ., ಐಟಿಸಿ ವಿಲ್ಸ್, ಕೂಟನ್ಸ್ ರಿಟೇಲ್ ಇಂಡಿಯ ಲಿ., ಲ್ಯಾಕೊಸ್ಟ್, ಲಿ ಆಂಡ್ ಫಂಗ್, ಲೈಫ್‌ಸ್ಟೈಲ್, ಮಸ್ತ್ ಲಂಕ, ನೆಕ್ಸ್ಟ್ ಇಂಪಲ್ಸ್, ನೈಕ್ ಇಂಕ್., ಪಿರಾಮಿಡ್, ರೇಮಂಡ್, ರೀಬಾಕ್, ರಿಲೈಯನ್ಸ್ ರಿಟೇಲ್, ಶಾಪರ‍್ಸ್ ಸ್ಟಾಪ್, ಸ್ಪೆನ್ಸರ‍್ಸ್ ರಿಟೇಲ್, ಸ್ಟೀವ್ ಆಂಡ್ ಬರ್ರಿಸ್, ಟಿಸಿಎನ್‌ಎಸ್ ಲಿಮಿಟೆಡ್, ಕೆಎಸ್‌ಎ ಟೆಕ್ನೊಪಾರ್ಕ್, ದಿ ಹೋಮ್ ಸ್ಟೋರ್, ಟಾಮಿ ಹಿಲ್‌ಫೈಗರ್, ಟ್ರೈಬರ್ಗ್, ಟ್ರೈಡೆಂಟ್ ಗ್ರೂಪ್, ಟುಕಟೆಕ್ ಇಂಕ್., ವಿಎಫ್ - ಅರವಿಂದ್ ಬ್ರ್ಯಾಂಡ್ಸ್ ಲಿಮಿಟೆಡ್, ವೆಲ್ಸ್‌ಪನ್ ಗ್ರೂಪ್, ವೈಕೆಕೆ ಫಾಸ್ಟೆನಿಂಗ್ ಪ್ರೆಡಕ್ಸ್ಟ್ ಗ್ರೂಪ್ ಇತ್ಯಾದಿ. |
|
|
|
|