ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ

     
 
     
               
 
sign up for e-zine  
 
 

 

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯು 1986ರಲ್ಲಿ ವಸ್ತ್ರ ಮಂತ್ರಾಲಯದ ಆಶ್ರಯದಲ್ಲಿ ಭಾರತ ಸರಕಾರದ ಅಧೀನದಲ್ಲಿ ಸ್ಥಾಪಿಸಲಾಯಿತು. ಜಾಗತಿಕ ಚಿತ್ರಣವನ್ನು ಹೊಂದಿದ ಫ್ಯಾಶನ್ ವ್ಯವಹಾರದಲ್ಲಿ ಮುಂದಾಳತ್ವದ ಸ್ಥಾನವನ್ನು ಕೈಗೊಳ್ಳುವಂತಹ ಉದ್ದಿಮೆದಾರರನ್ನು ಬೇಳೆಸುವ ಮೂಲಕ ಇದು ಡಿಸೈನ್ (ವಿನ್ಯಾಸ), ಮ್ಯಾನೇಜ್‌ಮೆಂಟ್ ಮತ್ತು ಟೆಕ್ನಾಲಜಿಯಲ್ಲಿನ ಸರ್ವಶ್ರೇಷ್ಠ ಸಂಸ್ಥೆಯಾಗಿ ಹೊರ ಹೊಮ್ಮಿದೆ. 2006ರಲ್ಲಿ ನಿಫ್ಟ್ ಪದವಿ ಪ್ರಶಸ್ತಿಯನ್ನು ಮತ್ತು ಇತರ ಶೈಕ್ಷಣಿಕ ವಿಶೇಷ ಮನ್ನಣೆಯನ್ನು ಕೊಡುವಂತೆ ಕಾನೂನಿನ ಸ್ಥಾನಮಾನವನ್ನು ಭಾರತದ ಪಾರ್ಲಿಮೆಂಟ್‌ನಿಂದ ಪಡೆದಿದೆ.
 
ಸಂಸ್ಥೆಯು ದೇಶದಲ್ಲಿನ ಹನ್ನೆರಡು ವೃತ್ತಿ ನಿರ್ವಹಣೆಯ ಕೇಂದ್ರಗಳಾದ ಹೊಸ ದೆಹಲಿ, ಬೆಂಗಳೂರು, ಚೆನ್ನೈ, ಗಾಂಧಿನಗರ,  ಹೈದರಾಬಾದ್,  ಕಲ್ಕತ್ತ, ಮುಂಬಯಿ, ರಾಯಿಬರೇಲಿ, ಭೂಪಾಳ, ಕಣ್ಣೂರು, ಪಟ್ಣಾ, ಮತ್ತು ಶಿಲ್ಲಾಂಗ್‌ನ ಮೂಲಕ ಫ್ಯಾಶನ್ ವ್ಯವಹಾರದ ಶಿಕ್ಷಣದ ವಿಕಸನದ ಮುಂಚೂಣಿಯಲ್ಲಿದೆ ಎಂದು ಮನದಟ್ಟು ಮಾಡಿದೆ. ಇದಲ್ಲದೆ  ಮಾರಿಷಸ್‌ನಲ್ಲಿ ಅಂತರಾಷ್ಟ್ರೀಯ ಕೇಂದ್ರವನ್ನು ತೆರೆಯುವ  ಮೂಲಕ  ನಿಫ್ಟ್ ತನ್ನ ರೆಕ್ಕೆಯನ್ನು ಜಾಗತಿಕ ಮಟ್ಟದಲ್ಲಿ ಸವಿಸ್ತಾರವಾಗಿ ಹರಡುತ್ತಿದೆ.
ರಚನಾತ್ಮಕ ಮೆಧಾವಿ ಮತ್ತು ತಾಂತ್ರಿಕವಾಗಿ ಸ್ಪರ್ಧಾತ್ಮಕ ಉದ್ದಿಮೆದಾರರ ಸಮೂಹವನ್ನೇ ಒದಗಿಸುವುದರ ಮೂಲಕ ನಿಫ್ಟ್ ಶೈಕ್ಷಣಿಕ ದರ್ಜೆಯನ್ನು ನಿಶ್ಚಯಿಸಿದೆ ಮತ್ತು ಮುಂದಾಳತ್ವವನ್ನು ಕಲಿಸಿಕೊಟ್ಟಿದೆ. ಸಂಸ್ಥೆಯು ಫ್ಯಾಶನ್ ಶಿಕ್ಷಣ, ಸಂಶೋಧನೆ ಮತ್ತು ತರಬೇತಿಗೆ ಸಮಾನ ವೇದಿಕೆಯನ್ನು ಒದಗಿಸಿ ಕೊಟ್ಟಿದೆ.