ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ
ಬೆಂಗಳೂರು
     
urhere
      ಸಮೂಹ ಉದ್ಯಮಶೀಲತೆ  
   
 
 

Intranet Login

Username:

Password:

niftmail
 

cluster1

ಕೌಶಲ ಉನ್ನತೀಕರಣ
ಕಡ್ಡಿರಾಮಪುರ ತಾಂಡ, ಸೀತಾರಾಮ ತಾಂಡ ಮತ್ತು ಮರಿಯಮ್ಮನಹಳ್ಳಿ ತಾಂಡಾಗಳಿಗೆ ಸೇರಿದ ವಿವಿಧ ಎಸ್.ಎಚ್.ಜಿ.ಎಸ್. ಗಳ ಸುಮಾರು 70 ಸದಸ್ಯರು ಹತ್ತಿ ಬಟ್ಟೆಯಿಂದ ರೇಶ್ಮೆ ಬಟ್ಟೆ ಕಸೂತಿಗೆ ಉನ್ನತೀಕರಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ರೇಶ್ಮೆ ಬಟ್ಟೆ ಕಸೂತಿ ಹೆಚ್ಚು ಬೆಲೆ ತಂದುಕೊಡುತ್ತದೆ. ಕಡ್ಡಿರಾಮಪುರ ತಾಂಡದ ಎಸ್.ಎಚ್.ಜಿ. ಸದಸ್ಯರು ಜೂನ್ 07 ರಲ್ಲಿ  ರೇಶ್ಮೆ ಬಟ್ಟೆ ಕಸೂತಿ ತರಬೇತಿ ಪಡೆದ ಪ್ರಥಮ ಗುಂಪು. ಇವರು ರೇಶ್ಮೆ ಮೇಲುಪಟ್ಟಿಗಳನ್ನು ಪ್ರಥಮವಾಗಿ ಜೂಲೈ 07 ರಲ್ಲಿ ತಯಾರಿಸಿದರು ಹಾಗೂ ಸೆಪ್ಟೆಂಬರ್ 07 ರಲ್ಲಿ ಒಂದು “ಕೌಶಲ ಮತ್ತು ಡಿಜೈನ್ ವರ್ಗಾವಣೆ ಕಾರ್ಯಗಾರ”ದಲ್ಲಿ ಸೀತಾರಾಮ ತಾಂಡದಲ್ಲಿ ಇತರ ಗುಂಪುಗಳಿಗೆ ತರಬೇತಿ ನೀಡಿದರು.

ಡಿಜೈನ್ ನಾವೀನ್ಯತೆ
ಹೊಸ ಉತ್ಪನ್ನಗಳನ್ನು ವಿನ್ಯಾಸ ಪ್ರತಿಯೊಂದು ಕಲಾವಸ್ತುವಿನಲ್ಲೂ ಮಾಡುವಾಗ ನಾವು ಅಂತಾರಾಷ್ಟ್ರೀಯ ಆಕರ್ಶಣೆ ಮತ್ತು ದೇಶೀಯ ಸತ್ವಗಳ ಸಮತೋಲನ ಕಾಪಾಡುವ ಉದ್ದೇಶ ಹೊಂದಿದ್ದೆವು. ಹಾಗಾಗಿ ಎದ್ದು ಕಾಣುವ, ಗಟ್ಟಿ ಹೊಲಿಗೆಯ ಲಂಬಾಣಿ ಕಸೂತಿಯ ಜೊತೆ ಫ್ರೆಂಚ್ ತಂತ್ರವಾದ ’ಬೈಕೋರ್ಬು’ ಅಥವಾ ಮೂರು ಆಯಾಮ ರೂಪದ ಕಸೂತಿ ಬಟ್ಟೆಯನ್ನು ಅಳವಡಿಸಿದೆವು. ನಮಗೂ ಮತ್ತು ಕಲೆಗಾರರಿಗೂ ಇದೊಂದು ಅದ್ಭುತ ಅವಿಷ್ಕಾರವಾಯಿತು.