ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ
ಬೆಂಗಳೂರು
     
urhere
      ಶೈಕ್ಷಣಿಕ ಸಮಗ್ರತೆ  
   
 
 

Intranet Login

Username:

Password:

niftmail
 

cluster2cluster3


ಎನ್.ಐ.ಎಫ್.ಟಿ. ಪ್ರಾಥಮಿಕವಾಗಿ ಒಂದು ಶೈಕ್ಷಣಿಕ ಸಂಸ್ಥೆಯಾಗಿರುವ ಕಾರಣ ಅದು ಎಲ್ಲ ಶಿಕ್ಷಣ ವಿಷಯಗಳಿಗೆ ಸೇರಿದ ಆಸಕ್ತ ಯುವ ವಿದ್ಯಾರ್ಥಿಗಳ ಗುಂಪನ್ನು ತಲುಪಬೇಕಾಗುತ್ತದೆ – ಡಿಜೈನ್, ತಂತ್ರಜ್ಞಾನ ಮತ್ತು ಮ್ಯಾನೇಜ್‍ಮೆಂಟ್, ಇವರು ಸಮೂಹ ಉದ್ಯಮಶೀಲತೆ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಲು ಉತ್ಸುಕರಾಗಿರುತ್ತಾರೆ. ಈ ಯುವಕರು, ಗ್ರಾಮೀಣ ಕಲೆಗಾರರೊಂದಿಗೆ ಕೆಲಸಮಾಡುವುದರಿಂದ ತಮ್ಮ ಅನುಭವವನ್ನು ಹೆಚ್ಚಿಸಿಕೊಳ್ಳುತ್ತಾರೆ. ನಾವು ಲಂಬಾಣಿ ಕಸೂತಿಯನ್ನು ಭಾರತದ ಉಡುಪುಗಳಲ್ಲಿ ಅತ್ಯಾಧುನಿಕವಾಗಿ ಸೇರಿಸಬೇಕೆಂದುಕೊಂಡಾಗ, ಎನ್.ಐ.ಎಫ್.ಟಿ. ಕ್ಯಾಂಪಸ್‍ನಲ್ಲಿ ಲಂಬಾಣಿ ಕಲೆಗಾರರೊಂದಿಗೆ     ನಡೆದ ಒಂದು ಕಾರ್ಯಗಾರದ ಮೂಲಕ 25 ವಿದ್ಯಾರ್ಥಿಗಳು ತಮ್ಮ ಪ್ರೋಜೆಕ್ಟ್ ಉಡುಪುಗಳಿಗೆ ಅಲಂಕಾರ ಸಂಕೇತಗಳು, ಬಣ್ಣಗಳು ಮತ್ತು ಹೊಲಿಗೆಗಳನ್ನು ನಿರೂಪಣೆ ಮಾಡಿದರು. ಜೊತೆಗೆ ಕಲೆಗಾರರಿಗೆ ಪ್ಯಾಟರ್ನ್ ಕಟಿಂಗ್, ಗಾರ್ಮೆಂಟ್ ಫಿಟಿಂಗ್ ಮುಂತಾದ ವಿಷಯಗಳಲ್ಲಿ ತಿಳಿವಳಿಕೆ ದೊರೆಯಿತು. ಇದನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಕಸೂತಿ ಕಲೆಗಾರರಿಗೆ ಹಂಪಿಯಲ್ಲಿ ಒಂದು ಟೈಲರಿಂಗ್ ಘಟಕವನ್ನು ಸ್ಥಾಪಿಸುವ ಯೋಜನೆ ಇಟ್ಟುಕೊಂಡಿದ್ದೇವೆ. ಟೈಲರಿಂಗ್ ಮೆಶೀನ್‍ಗಳನ್ನು ಖರೀದಿ ಮಾಡಿ ಮಾಲಪ್ಪನಗುಡಿಯ ಆರ್.ಡಿ.ಇ.ಸಿ. ಕಛೇರಿಯಲ್ಲಿ ಸ್ಥಾಪಿಸಲಾಗಿದೆ. ಟೆಕ್ಸ್‍ಟೈಲ್ ಡಿಜೈನ್ ವಿದ್ಯಾರ್ಥಿಗಳು ಬನಾನ ಫೈಬರ್ ಫಲಾನುಭವಿಗಳ ತರಬೇತಿಗೆ ಮೊದಲು ಆಕರ್ಶಕ ಹೆಣೆದ ಟೇಬಲ್ ಮ್ಯಾಟ್‍ಗಳನ್ನು ಅಭಿವೃದ್ಧಿಪಡಿಸಿದರು. ಫ್ಯಾಶನ್ ಮತ್ತು ಲೈಫ್ ಸ್ಟೈಲ್ ವಿದ್ಯಾರ್ಥಿಗಳು ಕೂಡ ವಸ್ತುವಿನ ಮೌಲ್ಯ ಮತ್ತು ಉತ್ಪನ್ನವನ್ನು ವೈವಿಧ್ಯಗೊಳಿಸುವಂತಹ ಬನಾನ ಫೈಬರ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದರು.
ಸವಾಲುಗಳು
ಪ್ರಮುಖ ಉತ್ಪಾದನೆ ಕ್ಷೇತ್ರಗಳಲ್ಲಿ ಸಾಮರ್ಥ್ಯಗಳ ನಿರ್ಮಾಣ, ಮಾರಾಟ ಮತ್ತು ಕಲೆಗಾರರಲ್ಲಿ ಮುಂದಾಳತ್ವಗಳ ಮೂಲಕ ಬಡತನ ನಿವಾರಣೆ ಸಾಧ್ಯ; ಈ ಪ್ರಕ್ರಿಯೆಗಳಿಗೆ ಲಂಗರು ಹಾಕುವಂತಹ ಸವಾಲಿಗೆ ನಾವು ಸಿದ್ಧರಾಗುತ್ತಿದ್ದೇವೆ.