![]() |
![]() |
![]() |
|||||||||
| ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ | |||||||||||
ಬೆಂಗಳೂರು |
|||||||||||
| ಸೌಲಭ್ಯಗಳು | |||||||||||||||||||||||||||||||||||||||
|
ಸೌಲಭ್ಯಗಳು ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ(ರಾಷ್ಟ್ರೀಯ ಫ್ಯಾಶನ್ ತಂತ್ರಜ್ಞಾನ ಸಂಸ್ಥೆ)ಯು ಒಂದು ವಿನ್ಯಾಸ, ನಿರ್ವಹಣೆ ಮತ್ತು ತಂತ್ರಜ್ಞಾನದ ಶೈಕ್ಷಣಿಕ ಸಂಸ್ಥೆಯಾಗಿದ್ದು, ಫ್ಯಾಶನ್ ಉದ್ಯಮಕ್ಕೆ ಹೋಗುವ ವೃತ್ತಿಪರರ ಗುಣಮಟ್ಟಕ್ಕಾಗಿ ಮೈಲುಗಲ್ಲನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ ಮತ್ತು ಪ್ರಾಯೋಗಿಕ ಮತ್ತು ಪಠ್ಯ ಅಧ್ಯಯನ ಎರಡರ ತರಬೇತಿಯನ್ನು ಪಡೆದುಕೊಳ್ಳುವ ಸಲುವಾಗಿ ಸಮಗ್ರವಾದ ಮತ್ತು ಅತ್ಯಾಧುನಿಕ ವಿಧಾನದ ಮೂಲಭೂತ ಸೌಕರ್ಯಗಳನ್ನು ಮತ್ತು ಉಪಕರಣಗಳನ್ನು ಸಂಸ್ಥೆ ಒದಗಿಸಿದೆ. ವಿದ್ಯಾರ್ಥಿಗಳಿಗೆ ನೀಡಲಾಗಿರುವ ಸೌಲಭ್ಯಗಳು ಮತ್ತು ಸೇವೆಗಳು ಅವರಿಗೆ ಪ್ರಾಯೋಗಿಕ ಪರೀಕ್ಷೆ ಮತ್ತು ಕ್ರಿಯಾತ್ಮಕ ವಿಚಾರಗಳನ್ನು ಬೆಳೆಸಿಕೊಳ್ಳುವ ಸ್ವಾತಂತ್ರ್ಯ ನೀಡುತ್ತವೆ. ಎನ್‌ಐಎಫ್‌ಟಿಯಲ್ಲಿ, ಪ್ರಪಂಚದಲ್ಲಿ ಉತ್ತಮವೆನಿಸುವುದಕ್ಕೆ ಸಮಾನವಾದ ಸೌಲಭ್ಯಗಳೊಂದಿಗೆ ಭರ್ತಿಯಾಗಿರುವ ಉಲ್ಲಾಸದ ಮತ್ತು ಸ್ಪಂದನ ಶೀಲವಾದ ಕ್ಯಾಂಪಸ್ ಇದೆ. ಉಪನ್ಯಾಸ ಕೋಣೆಗಳು, ವಿನ್ಯಾಸ ಸ್ಟುಡಿಯೋಗಳು ಮತ್ತು ಪ್ರಯೋಗಾಲಯಗಳು, ಸಂಪನ್ಮೂಲ ಕೇಂದ್ರಗಳು, ಚಟುವಟಿಕೆ ಕೇಂದ್ರಗಳು ಮತ್ತು ವಿದ್ಯಾರ್ಥಿನಿಲಯಗಳಿಂದ ಎಲ್ಲ ಎನ್‌ಐಎಫ್‌ಟಿ ಕಟ್ಟಡಗಳು ಸಂಪೂರ್ಣವಾಗಿ ತುಂಬಿರುವಂತೆ ಕ್ರಿಯಾತ್ಮಕ ವಾಸ್ತುಶಾಸ್ತ್ರದ ಮತ್ತು ವಿಶಾಲವಾದ ಆವರಣ ವಿವರಿಸುತ್ತದೆ. ಪ್ರಾಯೋಗಿಕ ಸ್ಥಾಪನೆಗಳು ಮತ್ತು ಕಲಾ ತಂತ್ರಜ್ಞಾನದ ಮೂಲಕ ಸ್ವಂತ ಅನುಭವ ಪಡೆಯುವುದಕ್ಕೆ ಶಿಕ್ಷಣ ರಚನೆ ಪ್ರಾಮುಖ್ಯತೆ ನೀಡುತ್ತದೆ.
|
|
|||||||||||||||||||||||||||||||||||||
![]() |
|||||||||||||||||||||||||||||||||||||||