ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯು ೧೯೮೬ ರಲ್ಲಿ ಭಾರತ ಸರ್ಕಾರದ ಜವಳಿ ಸಚಿವಾಲಯದ ಆಶ್ರಯದಡಿಯಲ್ಲಿ ಸ್ಥಾಪಿತವಾಯಿತು. ಅದು ಪ್ರಮುಖ ವಿನ್ಯಾಸ, ನಿರ್ವಹಣಾ ಮತ್ತು ತಾಂತ್ರಿಕ ಸಂಸ್ಥೆಯಾಗಿ ಹೊರಹೊಮ್ಮಿದೆ, ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ರಂಗದ ಫ್ಯಾಷನ್ ವಹಿವಾಟಿನಲ್ಲಿ ನಾಯಕತ್ವವಹಿಸಬಲ್ಲ ವೃತ್ತಿಪರರನ್ನು ಅಭಿವೃದ್ಧಿಪಡಿಸುತ್ತಿದೆ.
ಈ ಸಂಸ್ಥೆಯು ದೇಶದಾದ್ಯಂತ ವೃತ್ತಿಪರವಾಗಿ ನಿರ್ವಹಿಸಲ್ಪಡುತ್ತಿರುವ ಏಳು ಕೇಂದ್ತಗಳಾದ ನವದೆಹಲಿ,ಬೆಂಗಳೂರು, ಚೆನ್ನೈ, ಗಾಂಧಿನಗರ,ಹೈದರಾಬಾದ್, ಕೊಲ್ಕತಾ ಮತ್ತು ಮುಂಬೈಗಳಲ್ಲಿ ಫ್ಯಾಷನ್ ವಹಿವಾಟಿನ ಶಿಕ್ಷಣವನ್ನು ದೂರ ದೃಷ್ಠಿಯಿಂದ ಬಲಗೊಳಿಸುವಲ್ಲಿ ಮುಂಚೂಣಿಯಲ್ಲಿದೆ .
ರಾಷ್ಟ್ರೀಯ ಫ್ಯಾಷನ್ ಸಂಸ್ಥೆಯು ಶೈಕ್ಷಣಿಕ ಮಾನದಂಡವನ್ನು ಸ್ಥಾಪಿಸಿದೆ ಮತ್ತು ಸೃಜನಾತ್ಮಕ ಮತ್ತು ತಾಂತ್ರಿಕವಾಗಿ ಪರಿಣಿತರಾದ ವೃತ್ತಿಪರರಾದ ಬುದ್ದಿವಂತರನ್ನೊದಗಿಸುವುದರಿಂದ ಚಿಂತನಾತ್ಮಕವಾಗಿ ಉತ್ಕೃಷ್ಟವಾಗಿದೆ. ಸಂಸ್ಥೆಯು ಸೌಂದರ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿಗೆ ಒಂದೇ ವೇದಿಕೆಯನ್ನು ಒದಗಿಸಿದೆ.
ಅಂತರ್ರಾಷ್ಟ್ರೀಯ ಸಂಪರ್ಕ:
ರಾಷ್ಟ್ರೀಯ ಸೌಂದರ್ಯ ತಾಂತ್ರಿಕ ಸಂಸ್ಥೆ(ಓIಈಖಿ)ಯು ದೆಹಲಿಯಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು ವಿನ್ಯಾಸ, (ಮ್ಯಾನೇಜ್‌ಮೆಂಟ್) ನಿರ್ವಹಣೆ ,ಮತ್ತು ತಂತ್ರಜ್ಞಾನದಲ್ಲಿ ಪದವಿ ಮತ್ತು ಸ್ನಾತಕೊತ್ತರ ಶಿಕ್ಷಣ ನೀಡುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ . ರಾ.ಸೌ.ಸಂ.ಯು ಇತರೆ ಸಮಾನ ಆಸಕ್ತಿಯುಳ್ಳ ಪರಸ್ಪರ ಹಂತ ಹಂತವಾಗಿ ತೀರ್ಮಾನಹೊಂದಿರುವ ಸಂಸ್ಥೆಗಳೊಂದಿಗೆ ನೇರ ಶೈಕ್ಷಣಿಕ ಸಹಭಾಗಿತ್ವವನ್ನು ಅಬಿವೃದ್ಧಿಪಡಿಸುವಸಲುವಾಗಿ ತಾನು ಬಿಗಿಯಾದ ಆಸಕ್ತಿಯನ್ನು ತೋರಿಸುತ್ತದೆ ಅಂತರ್ರಾಷ್ಟ್ರೀಯ ಸಂಪರ್ಕಗಳ ಕಛೇರಿ, ರಾ.ಸೌ.ತಾ.ಸಂ. (ಓIಈಖಿ) ಯು ಇಂತಹ ಶೈಕ್ಷಣಿಕ ವಿನಿಮಯದ ಸಾಧ್ಯತೆಗಳಿಗೆ ಅನುಕೂಲ ಮಾಡಿಕೊಡುತ್ತದೆ. ಇದೇ ನಿಟ್ಟಿನಲ್ಲಿ,ರಾ.ಸೌ.ತಾ.ಸಂಸ್ಥೆ.(ಓIಈಖಿ)ಯು ಅನೇಕ ವಿಶ್ವವಿದ್ಯಾಲಯಗಳು/ಸಂಸ್ಥೆಗಳೊಂದಿಗೆ ಒಡಂಬಡಿಕೆ(ಎಮ್ ಒ ಯು) ಮತ್ತು ಕಾರ್ಯತಂತ್ರದ ಹೊಂದಾಣಿಕೆಗಳಿಗೆ ಸಹಿಹಾಕಿದೆ.
ರಾ.ಸೌ.ತಾ ಸಂ.(ಓIಈಖಿ)ಯು ಈಗ ಒಡಂಬಡಿಕೆ ಮತ್ತು ಕಾರ್ಯತಂತ್ರದ ಹೊಂದಾಣಿಕೆ ಹೊಂದಿರುವ ಸಂಸ್ಥೆಗಳು /ವಿಶ್ವವಿದ್ಯಾಲಯಗಳ ಪಟ್ಟಿ.
೧ . ರಾಯಲ್ ಮೆಲ್ಬೋರ್ನ್ ತಂತ್ರಜ್ಞಾನ ಸಂಸ್ಥೆ, ಆಷ್ಟ್ರೇಲಿಯಾ
೨ . ನಾರ್ಥ್ ಕೆರೋಲಿನಾ ಸ್ಟೇಟ್ ವಿಶ್ವವಿದ್ಯಾಲಯ, ರ‍್ಯಾಲಿ.ಯು.ಎಸ್ ಎ.
೩ . ಹಾಂಗ್ಸ್ಕೋಲನ್ ಬೊರಾಸ್ (ಬೊರಾಸ್ ನ ವಿಶ್ಷವಿದ್ಯಾಲಯ ಕಾಲೇಜು,ಸ್ವೀಡನ್)
೪ . ಬರ್ಮಿಂಗ್ ಹ್ಯಾಮ್ ಕಲಾ ಮತ್ತು ವಿನ್ಯಾಸ ಸಂಸ್ಥೆ, ಬರ್ಮಿಂಗ್ ಹ್ಯಾಂ, ಯುಕೆ.
೫ . ಕಲಾ ವಿಶ್ವವಿದ್ಯಾಲಯ ಯು ಕೆ,
೬ . ಡೆಮಾಂಟ್ ಫೋರ್ಟ್ ವಿಶ್ವವಿದ್ಯಾಲಯ, ಯು ಕೆ
೭ . ಯೂನಿವರ್ಸಿಟಿ ಆಫ್ ಆರ್ಟ್ಸ್ ಯು, ಕೆ
೮ . ಡಾಮಸ್ ಅಕಾಡೆಮಿ ,ಇಟಲಿ
೯ . ನಾಬಾ ಇಟಲಿ
೧೦ . ನಾಟಿಂಗ್ ಹ್ಯಾಂ ಟ್ರಂಟ್ ಯೂನಿವರ್ಸಿಟಿ ಯು ಕೆ.( ಟ್ವಿನ್ನಿಂಗ್ ಅಗ್ರಿಮೆಂಟ್ ೦
೧೧ . ಆಮ್ಸ್‌ಟರ್‌ಡಾಂ ಫ್ಯಾಷನ್ ಇನ್ಸ್‌ಟಿಟ್ಯೂಟ್, ಆಮ್ಸ್ ಟರ್ ಡಾಂ.
- ಈ ವಿಷಯಗಳ ಕ್ಷೇತ್ರಗಳಲ್ಲಿ ವಿಶೇಷವಾಗಿ ಸೌಂದರ್ಯ ಶಿಕ್ಷಣ ಸಂಸ್ಥೆಗಳನಡುವಿನ ಶೈಕ್ಷಣಿಕ ಸಹಕಾರದ ಮೇಲೇ ಕೇಂದ್ರೀಕರಿಸಲಾಗಿದೆ. ಅವುಗಳಲ್ಲಿ ಸಮರ್ಥವಾದವುಗಳು :
-ವಿದ್ಯಾರ್ಥಿಗಳ ಆಯ್ಕೆಗಳ ಮೂಲಕ ಶೈಕ್ಷಣಿಕ ಪರಿವಿಡಿಯ ಮಾಹಿತಿ ವಿನಿಮಯದ ಬಗ್ಗೆ.
- ವಿದ್ಯಾರ್ಥಿಗಳ ಜ್ಞಾನದ ಬೆಳವಣಿಗೆಗಾಗಿ ಫ್ಯಾಷನ್ ಶಿಕ್ಷಣ ಸಂಸ್ಥೆಗಳಲ್ಲಿ ಸಂಬಂಧಿಸಿದ ವಿಷಯಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮೂಲಕ ವಿದ್ಯಾರ್ಥಿಗಳ ಭಾಗವಹಿಸುವಿಕೆ ( ವಿದ್ಯಾರ್ಥಿಗಳ ವಿದೇಶ ಅಧ್ಯಯನದ ಆಯ್ಕೆ )
- ವೃತ್ತಿಪರ ನೈಪುಣ್ಯತೆ ಮತ್ತು ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ ಸಿಬ್ಬಂದಿಗೆ ಸಿಬ್ಬಂದಿಯ ವಿನಿಮಯ
-ಎನ್ ಐ ಎಫ್ ಟಿ ಗೆ ಸಿಬ್ಬಂದಿವರ್ಗವನ್ನು ನೆರವಿಗೆ ಪಡೆಯುವ ಮೂಲಕ ಶೈಕ್ಷಣಿಕ ಪರಿವಿಡಿಯ ಬಗ್ಗೆ ಮಾಹಿತಿ ವನಿಮಯ .
-ಸಂಶೋಧನ ಯೋಜನೆಯಲ್ಲಿ ವಿದ್ಯಾರ್ಥಿ ಸಮೂಹ ಮತ್ತು ಸಿಬ್ಬಂದಿಯ ಭಾಗವಹಿಸುವಿಕೆ
- ಪ್ರದರ್ಶನ ಇತ್ಯಾದಿಗಳಂತಹ ಸಾಂಸ್ಕೃತಿ ವಿನಿಮಯಗಳ ವಿನಿಮಯದಿಂದ ವಿದ್ಯಾರ್ಥಿ ಸಮೂಹ ಮತ್ತು ಸಿಬ್ಬಂದಿವರ್ಗದ ಭಾಗವಹಿಸುವಿಕೆ .
ಹೆಚ್ಚಿನ ಮಾಹಿತಿಗಾಗಿ ಬರೆಯಿರಿ -
ಕೋ-ಆರ್ಡಿನೇಟರ್-ಇಂಟರ್‌ನ್ಯಾಷನಲ್ ಲಿಂಕೇeಸ್.
|