ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ
ಬೆಂಗಳೂರು
     
urhere
         
   
 
 

Intranet Login

Username:

Password:

niftmail
 

ಸಂಪನ್ಮೂಲ ಕೇಂದ್ರ - ನಿಯಮಗಳು

 ಗ್ರಂಧಾಲಯ ಮತ್ತು ಮಾಹಿತಿ ವಿಭಾಗದ ನಿಯಮಗಳು ಮತ್ತು ಮಾರ್ಗದರ್ಶನಗಳು
 
೧. ಸದಸ್ಯತ್ವ :
೧. ಕೋರ್ಸ್ ಸೇರಿದ ತಕ್ಷಣ ಛಾಯಾಚಿತ್ರದೊಂದಿಗೆ ತಿಳಿಸಿರುವ ನಮೂನೆಯಲ್ಲಿ ಗ್ರಂಥಾಲಯ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬೇಕು. ಅನ್ವಯವಾಗುವ ನಿಯಮದಂತೆ  ಸದಸ್ಯತ್ವವನ್ನು ನೀಡಲಾಗುವುದು. ಗ್ರಂಥಾಲಯ ಸದಸ್ಯತ್ವದ ಕಾರ್ಡನ್ನು ವರ್ಗಾಯಿಸುವಂತಿಲ್ಲ. ಅದನ್ನು ಕಳೆದುಕೊಂಡರೆ ಗ್ರಂಥಾಲಯದ ಮುಖ್ಯಸ್ಥರಿಗೆ ತಿಳಿಸ ಕು. ೫೦ ರೂ. ಪಾವತಿಯೊಂದಿಗೆ ನಕಲಿ ಸದಸ್ಯತ್ವದ ಕಾರ್ಡನ್ನು ನೀಡಲಾಗುತ್ತದೆ.
 
೨. ಶಿಕ್ಷಣದ ಕಾರ್ಯಕ್ರಮಗಳನ್ನು ಮುಂದುವರಿಸುವ ವಿದ್ಯಾರ್ಥಿಗಳು, ಎನ್‌ಐಎಫ್‌ಟಿಯ ಪೂರ್ವ ವಿದ್ಯಾರ್ಥಿ, ಅತಿಥಿ ಶಿಕ್ಷಕ, ಉದ್ಯಮದ ಸದಸ್ಯರು ಮತ್ತು ಇv ರರು, ಅಗತ್ಯದ ಮಾಹಿತಿಯೊಂದಿಗೆ ಭರ್ತಿ ಮಾಡಿದ ಅರ್ಜಿಯೊಂದಿಗೆ ಹೇಳಲಾದ ಪಾವತಿ ಮಾಡುವ ಮೂಲಕ ಸಂಪನ್ಮೂಲ ಕೇಂದ್ರದ ಸದಸ್ಯತ್ವವನ್ನು ಪಡೆಯ ಬಹುದು.
 
೨. ಬಳಸಬಾರದ ವಸ್ತುಗಳು: -
೧. ಅವಲೋಕನ ಪುಸ್ತಕಗಳು, ನಿಯತಕಾಲಿಕೆಗಳು, ಪತ್ರಿಕೆಗಳು ಮತ್ತು ಮ್ಯಾಗಜಿನ್‌ಗಳು, ಭವಿಷ್ಯ ಪತ್ರಿಕೆಗಳು, ದೃಶ್ಯ-ಶ್ರವ್ಯ ಸಾಮಾಗ್ರಿಗಳು, ಸ್ಲೈಡ್‌ಗಳು ಮತ್ತು  ಮಾಹಿತಿ ವಿಭಾಗದ ಐಟಂಗಳನ್ನು ತೆಗೆದುಕೊಳ್ಳುವಂತಿಲ್ಲ.
 
೩. ಬಳಸಿಕೊಳ್ಳುವುದು:
೧. ಒಂದು ಪುಸ್ತಕವನ್ನು ಮೊದಲ ಮೂರು ದಿನಗಳು ದಿನಕ್ಕೆ ೧ ರೂ. ನಂತೆ ಮತ್ತು ನಂತರ ದಿನಕ್ಕೆ ೨ ರೂ. ನಂತೆ ೮ ದಿನಗಳಿಗಿಂತ ಹೆಚ್ಚು ದಿನಗಳು ತೆಗೆದುಕೊಳ್ಳ ಬಹುದು. ತೆಗೆದುಕೊಂಡ ಪುಸ್ತಕವನ್ನು ವಾಪಸು ಮಾಡುವಾಗ ಕನಿಷ್ಟ ಒಂದು ದಿನಕ್ಕೆ ಪುನರಾಂಭಿಸಲು ಅಥವಾ ಮತ್ತೆ ಒದಗಿಸಲು ಸಾಧ್ಯವಿಲ್ಲ. ಸಂಪನ್ಮೂಲ  ಕೇಂದ್ರದ ಪುಸ್ತಕಗಳು ಅಥವಾ ವಸ್ತುಗಳು ಹಾಳಾದರೆ ಅಥವಾ ನಷ್ಟವಾದರೆ ಅವುಗಳ ಮೂಲ ದರದ ೫ ಪಟ್ಟು ಹೆಚ್ಚು ಪರಿಹಾರ ವಿಧಿಸಲಾಗುತ್ತದೆ ಅಥವಾ ಅದನ್ನು  ತಂದು ಕೊಡಬೇಕಾಗುತ್ತದೆ. ಪುಸ್ತಕಗಳು ಮತ್ತು ಐಟಂಗಳನ ನಷ್ಟ / ಹಾನಿಯನ್ನು ತುಂಬಿ ಕೊಡುವವರೆಗೆ ಯಾವುದನ್ನು ಪಡೆಯುವ ಅವಕಾಶವಿರುವುದಿಲ್ಲ.
 
೪. ಗ್ರಂಥಾಲಯ ಪುಸ್ತಕಗಳು:
೧. ವಾಪಸು ಮಾಡಲು ತರುವ ಹೊರತಾಗಿ ಗ್ರಂಥಾಲಯದಲ್ಲದ ಪುಸ್ತಕಗಳು ಮತ್ತು ವಿತರಿಸಿದ ಪುಸ್ತಕಗಳನ್ನು ಅವಲೋಕನಕ್ಕಾಗಿ ಗ್ರಂಥಾಲಯದ ಒಳಗಡೆ  ಪ್ರವೇಶವಿರುವುದಿಲ್ಲ. ಭದ್ರತಾ ಸ್ಥಳದಲ್ಲಿ ಅದನ್ನು ಸುರಕ್ಷಿತವಾಗಿ ಇಡಬಹುದು.
 
೨. ಬ್ಯಾಗ್‌ಗಳು, ಜರ್ಕಿನ್‌ಗಳು, ಸೂಟ್‌ಕೇಸ್‌ಗಳು, ಪರ್ಸ್‌ಗಳು ಇತ್ಯಾದಿಗಳಿಗೆ ಗ್ರಂಥಾಲಯದಲ್ಲಿ ಪ್ರವೇಶವಿಲ್ಲ, ಅವನ್ನು ಪ್ರವೇಶದ್ವಾರದಲ್ಲಿ ಒದಗಿಸಲಾದ ಸ್ಥ ದಲ್ಲಿ ಸುರಕ್ಷಿತವಾಗಿ ಇಡಬಹುದು. ಆಹಾರ ಸೇವನೆ, ಕುಡಿಯುವುದು ಮತ್ತು ಧೂಮಪಾನವನ್ನು ಸಂಪನ್ಮೂಲ ಕೇಂದ್ರದ ಒಳಗಡೆ ಖಚಿತವಾಗಿ ನಿಷೇಧಿಸಲಾಗಿದೆ.
 
೫. ನಕಲು ಪ್ರತಿ, ಸ್ಕ್ಯಾನಿಂಗ್, ತರಗತಿ ಕೋಣೆ ಅವಲೋಕನಗಳು ಇತ್ಯಾದಿಗಳಿಗಾಗಿ ಸಂಪನ್ಮೂಲ ಕೇಂದ್ರಗಳ ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ತೆಗೆದುಕೊ ಲಾಗಿದೆ. ಸಂಸ್ಥೆಯೊಳಗಿನ ವಿತರಣಾ ವ್ಯವಸ್ಥೆಯಡಿ, ತಿಳಿಸಿದ ನಿರ್ದಿಷ್ಟವಾದ ದಿನದಂದು ಹೇಳಿದ ತಾಸಿನೊಳಗೆ ವಾಪಸು ಮಾಡಬೇಕು, ಆಗದಿದ್ದರೆ ಪುಸ್ತಕಗಳು ಮv  ಇತರ ವಸ್ತುಗಳ ಮೂಲ ದರದ ಶೇ. ೨೫ ರಷ್ಟು ಹೆಚ್ಚು ಹಣವನ್ನು ದಿನಕ್ಕೆ ದಂಡವಾಗಿ ವಿಧಿಸಲಾಗುತ್ತದೆ.
 
-------------
 
೬. ಐಟಂಗಳನ್ನು ನಕಲು ಪ್ರತಿ ತೆಗೆಯಬಾರದು:
೧. ಭವಿಷ್ಯದ ಪತ್ರಿಕೆಗಳ ನಕಲು ಪ್ರತಿ ತೆಗೆಯುವುದು ಮತ್ತು ಸ್ಕ್ಯಾನಿಂಗ್ ಮಾಡುವುದನ್ನು ಕಠಿಣವಾಗಿ ನಿಷೇಧಿಸಲಾಗಿದೆ.
 
೭. ಸಾಮಾನ್ಯ ನಿಮಯಗಳು:
 
೧. ಸಂಪನ್ಮೂಲ ಕೇಂದ್ರಗಳಿಗೆ ಪ್ರವೇಶಿಸುವಾಗ ಖಂಡಿತವಾಗಿ ಸಂಸ್ಥೆಯ ಗುರುತಿನ ಚೀಟಿಯನ್ನು ತರಬೇಕಾಗುತ್ತದೆ. ಸಂಪನ್ಮೂಲ ಕೇಂದ್ರಕ್ಕೆ ಪ್ರವೇಶ ಮತ್ತು ಹೊರ  ಹೋಗುವುದನ್ನು ಹತ್ತಿರದಿಂದ ಗಮನಿಸಲಾಗುತ್ತದೆ ಮತ್ತು ಸಂಪನ್ಮೂಲ ಕೇಂದ್ರದ ಭದ್ರತಾ ಸ್ಥಳದಲ್ಲಿ ನಿಮ್ಮ ಹೆಸರು ತಿಳಿಸಿರಲಾಗುತ್ತದೆ.
 
೨ . ಸಂಪನ್ಮೂಲ ಕೇಂದ್ರದ ಲೈಬ್ರರಿ ಪುಸ್ತಕಗಳು, ನಿಯತಕಾಲಿಕೆಗಳು ಮತ್ತು ಇತರ ಐಟಂಗಳನ್ನು ಅನಧಿಕೃತವಾಗಿ ತೆಗೆದುಕೊಂಡು ಕಠಿಣವಾಗಿ ನಿಷೇಧಿಸಲಾಗಿದೆ.
 
೩. ಕೇಂದ್ರದಲ್ಲಿ ನಕಲು ಪ್ರತಿಯ ಸೌಲಭ್ಯವನ್ನು ಪ್ರತಿ ಪುಟಕ್ಕೆ ೧ ರೂ. ನಂತೆ ಲಭ್ಯವಿದೆ. ಅದಕ್ಕಾಗಿ ಸಂಪನ್ಮೂಲ ಕೇಂದ್ರದಲ್ಲಿ ಕೂಪನ್‌ಗಳು ಲಭ್ಯವಿದೆ.
 
೪. ಸಂಪನ್ಮೂಲ ಕೇಂದ್ರದಲ್ಲಿ ಶಿಸ್ತು ಮತ್ತು ನಿಶಬ್ಧವನ್ನು ಖಚಿತವಾಗಿ ಕಾಪಾಡಿಕೊಳ್ಳಬೇಕು. ಚರ್ಚೆಗಳು, ವಿವರಣೆಗಳು, ಉಕ್ತಲೇಖನ ಮತ್ತು ಗಟ್ಟಿಯಾಗಿ ಓದುವು ದನ್ನು ಲೈಬ್ರರಿಯೊಳಗೆ ಅವಕಾಶವಿರುವುದಿಲ್ಲ.
 
೮. ಇತರ ಎನ್‌ಐಎಫ್‌ಟಿ ಕೇಂದ್ರಗಳ ಆರ್‌ಸಿ ಸೌಲಭ್ಯ:
೧. ಎನ್‌ಐಎಫ್‌ಟಿಯ ಇತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗುರುತಿನ ದೃಢೀಕರಣ ನೀಡಿ ಅವಲೋಕನಕ್ಕಷ್ಟೆ ಲೈಬ್ರರಿಯನ್ನು ಬಳಸಬಹುದು. ಇತರ  ಎನ್‌ಐಎಫ್‌ಟಿ ಕೇಂದ್ರಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಯಾವ ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ವಿತರಿಸುವುದಿಲ್ಲ.
 
೯. ಗ್ರಂಥಾಲಯ ಸಮಯ:
ಸೋಮವಾರದಿಂದ ಶುಕ್ರವಾರದವರೆಗೆ  - ಬೆಳಿಗ್ಗೆ ೯.೦೦ ರಿಂದ ರಾತ್ರಿ ೮.೦೦ ರವರೆಗೆ
ಶನಿವಾರ - ಬೆಳಿಗ್ಗೆ ೯.೩೦ ರಿಂದ ಸಂಜೆ ೫.೩೦ ರವರೆಗೆ
ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಲ್ಲಿ    ಮುಚ್ಚಿರುತ್ತದೆ